ADVERTISEMENT

GBS Outbreak | ಪಶ್ಚಿಮ ಬಂಗಾಳ: ಜಿಬಿಎಸ್ ಕಾಯಿಲೆಯಿಂದ ಮೂವರು ಸಾವಿನ ಶಂಕೆ

ಪಿಟಿಐ
Published 30 ಜನವರಿ 2025, 4:14 IST
Last Updated 30 ಜನವರಿ 2025, 4:14 IST
<div class="paragraphs"><p>ಜಬಿಎಸ್</p></div>

ಜಬಿಎಸ್

   

(ಐಸ್ಟೋಕ್ - ಸಾಂಕೇತಿಕ ಚಿತ್ರ)

ಕೋಲ್ಕತ್ತ: ಕಳೆದ ಕೆಲವು ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಶಂಕಿತ ಗಿಲ್ಲೈನ್-ಬರ್ರೆ ಸಿಂಡ್ರೋಮ್ (ಜಿಬಿಎಸ್) ಕಾಯಿಲೆಯಿಂದ ಮೂರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಹಾಗಿದ್ದರೂ ಸಾವಿನ ನಿಖರ ಕಾರಣವನ್ನು ರಾಜ್ಯ ಆರೋಗ್ಯ ಇಲಾಖೆ ಇನ್ನಷ್ಟೇ ಖಚಿತಪಡಿಸಬೇಕಿದೆ.

ಕೋಲ್ಕತ್ತ ಹಾಗೂ ಹೂಗ್ಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಮಗು ಸೇರಿ ಮೂವರು ಸಾವಿಗೀಡಾಗಿದ್ದಾರೆ.

'ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ' ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ಉತ್ತರ 24 ಪರಗಣ ಜಿಲ್ಲೆಯ ದೇಬ್‌ಕುಮಾರ್ ಸಹು (10), ಅರಿತ್ರ ಮನಾಲ್ (17) ಮತ್ತು ಹೂಗ್ಲಿ ಜಿಲ್ಲೆಯ 48 ವರ್ಷ ವ್ಯಕ್ತಿ ಎಂದು ಗುರುತಿಸಲಾಗಿದೆ.

ಇದೇ ವೇಳೆ, ಶಂಕಿತ ಜಿಬಿಎಸ್ ಕಾಯಿಲೆಯಿಂದ ಬಳಲುತ್ತಿರುವ ನಾಲ್ವರು ಮಕ್ಕಳಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.