ADVERTISEMENT

ಇಡುಕ್ಕಿ ಭೂಕುಸಿತ: ಮೃತರ ಸಂಖ್ಯೆ 61ಕ್ಕೆ ಏರಿಕೆ

ಮಂಗಳವಾರ ಮತ್ತೆ ಮೂರು ಶವ ಪತ್ತೆ: ಇನ್ನೂ 9 ಜನ ನಾಪತ್ತೆ

ಪಿಟಿಐ
Published 18 ಆಗಸ್ಟ್ 2020, 15:04 IST
Last Updated 18 ಆಗಸ್ಟ್ 2020, 15:04 IST
ಪೆಟ್ಟಿಮುಡಿಯಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯ(ಸಂಗ್ರಹ ಚಿತ್ರ)
ಪೆಟ್ಟಿಮುಡಿಯಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯ(ಸಂಗ್ರಹ ಚಿತ್ರ)   

ಇಡುಕ್ಕಿ: ಇಲ್ಲಿನ ಪೆಟ್ಟಿಮುಡಿ ಎಂಬಲ್ಲಿ ಆ.7ರಂದು ಸಂಭವಿಸಿದ್ದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಮಂಗಳವಾರ ಮತ್ತೆ ಮೂರು ಶವಗಳು ಪತ್ತೆಯಾಗಿದ್ದು, ಇನ್ನೂ 9 ಜನರು ನಾಪತ್ತೆಯಾಗಿದ್ದಾರೆ.

ಆರು ವರ್ಷದ ಬಾಲಕನ ಶವ ಹಾಗೂ 57 ವರ್ಷದ ವ್ಯಕ್ತಿಯೊಬ್ಬರ ಶವವನ್ನು ಗುರುತಿಸಲಾಗಿದ್ದು, ಮತ್ತೊಂದು ಶವದ ಗುರುತು ಇನ್ನಷ್ಟೇ ಸಿಗಬೇಕಿದೆ. ಚೆನ್ನೈನಿಂದ ನಾಲ್ವರು ಸದಸ್ಯರ ತಂಡವೊಂದು ಎರಡು ಗ್ರೌಂಡ್‌ ಪೆನೆಟ್ರೇಟಿಂಗ್‌ ರಡಾರ್‌(ಜಿಪಿಆರ್‌)ಗಳೊಂದಿಗೆ ಮಂಗಳವಾರ ಮಧ್ಯಾಹ್ನ ಶೋಧ ಕಾರ್ಯಕ್ಕೆ ಸೇರಿಕೊಂಡಿದೆ ಎಂದು ಇಡುಕ್ಕಿ ಜಿಲ್ಲಾ ಕಲೆಕ್ಟರ್‌ ಎಚ್‌.ದಿನೇಶ್‌ ತಿಳಿಸಿದರು.

ಭೂಕುಸಿತದಲ್ಲಿ 20 ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದವು.ಘಟನೆಯಲ್ಲಿ 12 ಜನರನ್ನು ರಕ್ಷಿಸಲಾಗಿದೆ. ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳ, ಪೊಲೀಸ್‌ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.