ADVERTISEMENT

ಪಿಎಫ್‌ಐ ಮುಖಂಡ ಸುಬೈರ್‌ ಹತ್ಯೆ ಪ್ರಕರಣ: ಮೂವರು ಆರ್‌ಎಸ್‌ಎಸ್ ಕಾರ್ಯಕರ್ತರ ಬಂಧನ

ಪಿಟಿಐ
Published 7 ಮೇ 2022, 3:48 IST
Last Updated 7 ಮೇ 2022, 3:48 IST
   

ಪಾಲಕ್ಕಾಡ್‌ (ಕೇರಳ):ಇಲ್ಲಿಗೆ ಸಮೀಪದಎಳಪ್ಪುಲ್ಲಿಯಲ್ಲಿ ಕಳೆದ ತಿಂಗಳು ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರ್‌ಎಸ್‌ಎಸ್‌ನ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

'ಪೀಪಲ್‌ ಫ್ರಂಟ್‌ ಆಫ್‌ ಇಂಡಿಯಾ' (ಪಿಎಫ್‌ಐ) ನಾಯಕ ಸುಬೈರ್‌ ಅವರನ್ನು ಏಪ್ರಿಲ್‌ 15ರಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಇದೀಗಸುಚಿತ್ರನ್‌, ಗಿರೀಶ್‌ ಮತ್ತು ಜಿನೀಶ್‌ ಬಂಧನಕ್ಕೊಳಗಾಗಿದ್ದಾರೆ.

ಇದೇ ಪ್ರದೇಶದಲ್ಲಿ ಕಳೆದ ನವೆಂಬರ್‌ನಲ್ಲಿ ಆರ್‌ಆರ್‌ಎಸ್‌ ಕಾರ್ಯಕರ್ತ ಎಸ್‌. ಸಂಜಿತ್‌ ಅವರನ್ನು ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು ಹತ್ಯೆ ಮಾಡಿದ್ದರು. ಈ ಕೃತ್ಯದ ಸೇಡಿಗಾಗಿ ಸುಬೈರ್‌ ಕೊಲೆ ನಡೆದಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.

ಸಂಜಿತ್‌ ಹತ್ಯೆ ಬಳಿಕ ತಲೆ ಮರೆಸಿಕೊಂಡಿದ್ದಪ್ರಮುಖ ಆರೋಪಿಯನ್ನೂಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.'ನಾವು ಬಾವ (57) ಎಂಬಾತನನ್ನು ಬಂಧಿಸಿದ್ದೇವೆ. ಈತ ಶಿಕ್ಷಕನಾಗಿದ್ದು, ಕೊಲೆ ಬಳಿಕ ತಲೆ ಮರೆಸಿಕೊಂಡಿದ್ದ' ಎಂದು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಎಳಪ್ಪುಲ್ಲಿಯಲ್ಲಿ ಸುಬೈರ್‌ ಹತ್ಯೆ ನಡೆದ ಮರುದಿನವೇ (ಏಪ್ರಿಲ್‌ 16ರಂದು) ಪಾಲಕ್ಕಾಡ್‌ ಜಿಲ್ಲೆಯಲ್ಲಿ ಆರ್‌ಎಸ್‌ಎಸ್‌ ಮುಖಂಡ ಎಸ್‌.ಕೆ. ಶ್ರೀನಿವಾಸನ್‌ (45) ಎನ್ನುವವರನ್ನು ಕೊಲೆ ಮಾಡಲಾಗಿತ್ತು. ಬೈಕ್‌ನಲ್ಲಿ ತೆರಳುತ್ತಿದ್ದ ಅವರ ಮೇಲೆ ಗುಂಪೊಂದು ದಾಳಿ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.