ಹೈದರಾಬಾದ್: ತೆಲಂಗಾಣ ಹಾಗೂ ಛತ್ತೀಸಗಢ ಗಡಿಯ ಮುಲುಗು ಜಿಲ್ಲೆಯಲ್ಲಿ ಗುರುವಾರ ನಕ್ಸಲರು ಹುದುಗಿಸಿದ್ದ ನೆಲಬಾಂಬ್ ಸ್ಪೋಟಗೊಂಡು ಮೂವರು ಪೊಲೀಸರು ಸಾವಿಗೀಡಾಗಿದ್ದಾರೆ.
ವಾಜೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಎಂದಿನಂತೆ ಬಾಂಬ್ ಶೋಧ ಕರ್ತವ್ಯದಲ್ಲಿದ್ದಾಗ ನೆಲಬಾಂಬ್ ಸ್ಫೋಟಗೊಂಡಿದೆ. ನಿಷೇಧಿತ ನಕ್ಸಲರು ಅರಣ್ಯ ಪ್ರದೇಶಗಳಲ್ಲಿ ಕಚ್ಚಾಬಾಂಬ್‌ಗಳನ್ನು ಹುದುಗಿಸಿ ಇಟ್ಟಿದ್ದು, ಪೊಲೀಸರು ಹೆಚ್ಚಿನ ಶೋಧ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.