ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಮುಂಬೈ: 2025ರ ಜನವರಿ ಮತ್ತು ಏಪ್ರಿಲ್ ನಡುವೆ ಮಹಾರಾಷ್ಟ್ರದಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ 21 ಜನರು ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ವಿವಿಧ ಕಾರಣಗಳಿಂದ 22 ಹುಲಿಗಳು ಸಾವನ್ನಪ್ಪಿವೆ ಎಂದು ಸರ್ಕಾರ ಶುಕ್ರವಾರ ವಿಧಾನಸಭೆಗೆ ಮಾಹಿತಿ ನೀಡಿದೆ.
ಜೊತೆಗೆ 2025 ರ ಜನವರಿ-ಏಪ್ರಿಲ್ ನಡುವೆ ಮಹಾರಾಷ್ಟ್ರದಲ್ಲಿ 40 ಚಿರತೆಗಳು ಸಾವನ್ನಪ್ಪಿವೆ. ಅವುಗಳಲ್ಲಿ ಮೂರು ಬೇಟೆಗೆ ಬಲಿಯಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ನೈಸರ್ಗಿಕ ಕಾರಣಗಳಿಂದ 13, ವಿದ್ಯುತ್ ಆವಘಡದಿಂದ 4, ರಸ್ತೆ ಮತ್ತು ರೈಲು ಅಪಘಾತಗಳಲ್ಲಿ ಮತ್ತು ತೆರೆದ ಬಾವಿಗಳಿಗೆ ಬಿದ್ದು 4 ಹುಲಿಗಳು ಮೃತಪಟ್ಟಿವೆ, ಇನ್ನೊಂದು ಹುಲಿಯ ಸಾವಿಗೆ ಕಾರಣ ಗೊತ್ತಾಗಿಲ್ಲ ಎಂದು ಅರಣ್ಯ ಸಚಿವ ಗಣೇಶ್ ನಾಯಕ್ ಲಿಖತ ಉತ್ತರದಲ್ಲಿ ಹೇಳಿದ್ದಾರೆ.
20 ಚಿರತೆಗಳು ರಸ್ತೆ, ರೈಲು ಅಪಘಾತಗಳಲ್ಲಿ ಮತ್ತು ತೆರೆದ ಬಾವಿಗಳಿಗೆ ಬಿದ್ದು, 8 ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿವೆ. ಬೇಟೆಯಾಡಿ ಮೂರು ಚಿರತೆಗಳನ್ನು ಕೊಲ್ಲಲಾಗಿದೆ. 9 ಚಿರತೆಗಳ ಸಾವಿಗೆ ಕಾರಣ ಪತ್ತೆಯಾಗಿಲ್ಲ.
ಜನವರಿ 2022 ರಿಂದ ಡಿಸೆಂಬರ್ 2024 ರವರೆಗೆ, ರಾಜ್ಯದಲ್ಲಿ ವಿವಿಧ ಕಾರಣಗಳಿಂದ 107 ಹುಲಿಗಳು ಸಾವಿಗೀಡಾಗಿವೆ. ಅದೇ ಅವಧಿಯಲ್ಲಿ ಒಟ್ಟು 707 ಕಾಡು ಪ್ರಾಣಿಗಳು ಸಾವನ್ನಪ್ಪಿವೆ ಎಂದು ನಾಯಕ್ ಉತ್ತರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.