1528: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಾಣ. ರಾಮ ಮಂದಿರವನ್ನು ಕೆಡವಿ ಅದರ ಅವಶೇಷಗಳ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದು ಹಿಂದೂಗಳ ವಾದ
1949: ಬಾಬರಿ ಮಸೀದಿಯೊಳಗೆ ರಾಮನ ವಿಗ್ರಹ ಪತ್ತೆ. ಎರಡೂ ಕಡೆಯವರಿಂದ ಪರಸ್ಪರರ ವಿರುದ್ಧ ದೂರು. ಇಡೀ ಪ್ರದೇಶವನ್ನು ‘ವಿವಾದಿತ ಪ್ರದೇಶ’ ಎಂದು ಘೋಷಿಸಿ ಮುಖ್ಯದ್ವಾರವನ್ನು ಮುಚ್ಚಿದ ಸರ್ಕಾರ
1950: ಮೂರ್ತಿ ಪೂಜೆಗೆ ಅವಕಾಶ ನೀಡುವಂತೆ ಮನವಿ ಮಾಡಿ ಗೋಪಾಲ ವಿಶಾರದ ಅವರಿಂದ ಫೈಜಾಬಾದ್ ಕೋರ್ಟ್‌ಗೆ ಅರ್ಜಿ
1959: ನಿವೇಶನದ ಹಕ್ಕು ಮಂಡಿಸಿ ನಿರ್ಮೋಹಿ ಅಖಾಡದಿಂದ ಅರ್ಜಿ
1961: ನಿವೇಶನದ ಹಕ್ಕು ಮಂಡಿಸಿ ಸುನ್ನಿ ವಕ್ಫ್ ಮಂಡಳಿಯಿಂದ ಅರ್ಜಿ
1983: ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸುವ ರಾಷ್ಟ್ರವ್ಯಾಪಿ ಆಂದೋಲನಕ್ಕೆ ವಿಶ್ವಹಿಂದೂ ಪರಿಷತ್‌ನಿಂದ ಚಾಲನೆ
1986: ದೇವಸ್ಥಾನದ ಮುಖ್ಯದ್ವಾರದ ಬೀಗವನ್ನು ತೆರೆಯುವಂತೆ ಜಿಲ್ಲಾ ನ್ಯಾಯಾಲಯದಿಂದ ಆದೇಶ. ‘ಬಾಬರಿ ಮಸೀದಿ ಕ್ರಿಯಾ ಸಮಿತಿ’ ಹುಟ್ಟುಹಾಕಿದ ಮುಸ್ಲಿಮರು
1989: ವಿಶ್ವಹಿಂದೂ ಪರಿಷತ್‌ನಿಂದ ಅಯೋಧ್ಯೆಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ, ಕಟ್ಟಡಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲು ಅಲಹಾಬಾದ್ ಹೈಕೋರ್ಟ್ ಆದೇಶ
1990: ಗುಜರಾತ್‌ನ ಸೋಮನಾಥದಿಂದ ಅಯೋಧ್ಯೆಯವರೆಗೆ ರಥಯಾತ್ರೆ ಆರಂಭಿಸಿದ ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ. ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಅಯೋಧ್ಯೆಗೆ ಬಂದಿದ್ದ ಕರಸೇವಕರು ಹಾಗೂ ಪೊಲೀಸರ ಮಧ್ಯೆ ಸಂಘರ್ಷ. ಕರಸೇವಕರನ್ನು ನಿಯಂತ್ರಿಸಲು ಗುಂಡುಹಾರಿಸಿದ ಪೊಲೀಸರು. ಹಲವು ಕರಸೇವಕರ ಸಾವು
1992 ಡಿಸೆಂಬರ್ 6: ಕರಸೇವಕರಿಂದ ಬಾಬರಿ ಮಸೀದಿ ಧ್ವಂಸ. ರಾಷ್ಟ್ರವ್ಯಾಪಿ ಕೋಮು ಗಲಭೆ ಆರಂಭ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಾವು. ಎರಡು ಎಫ್‌ಐಆರ್ ದಾಖಲು. ಒಂದು ಕರಸೇವಕರ ವಿರುದ್ಧ, ಇನ್ನೊಂದು ಎಲ್.ಕೆ. ಅಡ್ವಾಣಿ, ಅಶೋಕ್ ಸಿಂಘಲ್, ವಿನಯ್ ಕಟಿಯಾರ್, ಉಮಾಭಾರತಿ, ಸಾಧ್ವಿ ಋತಂಬರಾ, ಮುರಳಿಮನೋಹರ ಜೋಶಿ, ಗಿರಿರಾಜ್ ಕಿಶೋರ್ ಹಾಗೂ ವಿಷ್ಣು ಹರಿ ದಾಲ್ಮಿಯಾ ಅವರ ವಿರುದ್ಧ.
1993: ಪಿತೂರಿ ನಡೆಸಿದ ಆರೋಪದ ಮೇಲೆ ಅಡ್ವಾಣಿ ಹಾಗೂ ಇತರ ಮುಖಂಡದ ವಿರುದ್ಧ ಸಿಬಿಐಯಿಂದ ಆರೋಪ ಪಟ್ಟಿ ದಾಖಲು
2001: ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಬಾಳ ಠಾಕ್ರೆ ಮುಂತಾದ ನಾಯಕರ ವಿರುದ್ಧದ ವಿಚಾರಣೆಯನ್ನು ಕೈಬಿಟ್ಟ ವಿಶೇಷ ನ್ಯಾಯಾಲಯ
2004: ತಾಂತ್ರಿಕ ಕಾರಣವನ್ನು ಮುಂದಿಟ್ಟುಕೊಂಡು, ಬಿಜೆಪಿ ನಾಯಕರ ವಿರುದ್ಧದ ವಿಚಾರಣೆ ರದ್ದುಪಡಿಸಿದ್ದನ್ನು ಪ್ರಶ್ನಿಸಿ, ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠದ ಮೊರೆಹೋದ ಸಿಬಿಐ. ಕೋರ್ಟ್‌ನಿಂದ ನೋಟಿಸ್ ಜಾರಿ
2010: ಸಿಬಿಐ ಅರ್ಜಿಯು ವಿಚಾರಣೆಗೆ ಯೋಗ್ಯವಲ್ಲ ಎಂದು ತಳ್ಳಿಹಾಕಿದ ಹೈಕೋರ್ಟ್
2011: ಮಸೀದಿ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆಹೋದ ಸಿಬಿಐ
2017:ಸಿಬಿಐ ಮನವಿಯ ಮೇರೆಗೆ ಎರಡೂ ಎಫ್‌ಐಆರ್‌ಗಳನ್ನು ಸೇರಿಸಿಕೊಂಡು ಜಂಟಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅನುಮತಿ. ಬಿಜೆಪಿ ಮುಖಂಡರ ಮೇಲಿನ, ‘ಕಟ್ಟಡ ನೆಲೆಮಗೊಳಿಸಲು ಸಂಚು ರೂಪಿಸಿದ ಆರೋಪ’ಕ್ಕೆ ಮರುಜೀವ
2019 ಆಗಸ್ಟ್: ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ಎಸ್.ಎ ಬೊಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಜೀರ್ ಅವರನ್ನೊಳಗೊಂಡ ಪೀಠದಿಂದ ಅಯೋಧ್ಯೆ ನಿವೇಶನ ವಿವಾದ ಕುರಿತು ಪ್ರತಿನಿತ್ಯ ವಿಚಾರಣೆ ಆರಂಭ. ನವೆಂಬರ್‌ನಲ್ಲಿ ಅಯೋಧ್ಯೆಯ ವಿವಾದಿತ ನಿವೇಶನಕ್ಕೆ ಕುರಿತು ಸುಪ್ರೀಂ ಕೋರ್ಟ್ ತೀರ್ಪು.
2020 ಆಗಸ್ಟ್: ಪ್ರಧಾನಿ ಮೋದಿ ಅವರಿಂದ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ
ಕಟ್ಟಡ ನೆಲಸಮ ಪ್ರಕರಣದ ತೀರ್ಪು ನೀಡಲು ನಿಗದಿಪಡಿಸಿದ್ದ ಅವಧಿ ಒಂದು ತಿಂಗಳು ವಿಸ್ತರಣೆ. ಸೆ.30ಕ್ಕೆ ತೀರ್ಪು ನೀಡಲು ಸೂಚನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.