ADVERTISEMENT

ತಿರುಪತಿ ಉಪ ಚುನಾವಣೆ: ರತ್ನಪ್ರಭಾ ಅವರನ್ನು ಕಣಕ್ಕಿಳಿಸಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 20:58 IST
Last Updated 25 ಮಾರ್ಚ್ 2021, 20:58 IST
ರತ್ನಪ್ರಭಾ
ರತ್ನಪ್ರಭಾ   

ತಿರುಪತಿ: ಆಂಧ್ರಪ್ರದೇಶದ ತಿರುಪತಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿರುವ ಕೆ.ರತ್ನಪ್ರಭಾ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ತಿರುಪತಿ ಲೋಕಸಭಾ ಕ್ಷೇತ್ರಕ್ಕೆ ಏ.17ರಂದು ಚುನಾವಣೆ ನಡೆಯಲಿದೆ. ಇಲ್ಲಿ ರತ್ನಪ್ರಭಾ ಅವರನ್ನು ಕಣಕ್ಕಿಳಿಸುವ ಕುರಿತು ಇತ್ತೀಚೆಗಷ್ಟೇ ಬಿಜೆಪಿ ಮೂಲಗಳು ಸುಳಿವು ನೀಡಿದ್ದವು.

ಈ ಲೋಕಸಭಾ ಕ್ಷೇತ್ರದ (ಎಸ್‌.ಸಿ) ಪ್ರತಿನಿಧಿಯಾಗಿದ್ದ ಬಲ್ಲಿ ದುರ್ಗಾ ಪ್ರಸಾದ್‌ ರಾವ್‌ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ನಿಧನರಾಗಿದ್ದರು. ಆಂಧ್ರಪ್ರದೇಶದ ಮಾಜಿ ಐಎಎಸ್‌ ಅಧಿಕಾರಿ ದಾಸರಿ ಶ್ರೀನಿವಾಸುಲು, ತೆಲಂಗಾಣ ಕೇಡರ್‌ನ ನಿವೃತ್ತ ಮಾಜಿ ಐಪಿಎಸ್‌ ಅಧಿಕಾರಿ ಮುನಿ ಸುಬ್ರಹ್ಮಣ್ಯಂ ಅವರು ಸಹ ಬಿಜೆಪಿಯ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಅಂತಿಮವಾಗಿ ರತ್ನಪ್ರಭಾ ಅವರಿಗೆ ಅವಕಾಶ ದೊರೆತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.