ADVERTISEMENT

ಕೊರೊನಾ: ಕ್ವಾರಂಟೈನ್‌ ಕೇಂದ್ರಗಳಾದ ತಿರುಪತಿ ಛತ್ರಗಳು

ನಿಜಾಮುದ್ದೀನ್‌ ತಬ್ಲೀಗ್‌ ಜಮಾತ್‌ ಸಭೆಯಲ್ಲಿ ಭಾಗವಹಿಸಿದ್ದವರಿಗೂ ಇಲ್ಲಿ ಕ್ವಾರಂಟೈನ್

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 1:09 IST
Last Updated 7 ಏಪ್ರಿಲ್ 2020, 1:09 IST
ತಿರುಪತಿ ದೇವಸ್ಥಾನ
ತಿರುಪತಿ ದೇವಸ್ಥಾನ   
""

ಹೈದರಾಬಾದ್: ಕೊರೊನಾ ಸೋಂಕಿಗೆ ಕೋಮು ಬಣ್ಣ ಬಳಿಯುತ್ತಿರುವಸಂದರ್ಭದಲ್ಲಿಯೇ, ಆಂಧ್ರಪ್ರದೇಶದ ಹಲವು ದೇವಸ್ಥಾನಗಳು ಸೋಂಕು ಶಂಕಿತರಿಗೆ ಆಶ್ರಯವನ್ನು ನೀಡಲು ಮುಂದಾಗಿವೆ.

ಇದರ ಸಾರಥ್ಯದಲ್ಲಿ ತಿರುಮಲ ತಿರುಪತಿ ದೇವಸ್ಥಾವಿದ್ದು, ಪದ್ಮಾವತಿ ನಿಲಯಂ ಹಾಗೂ ವಿಷ್ಣು ವಾಸಂ ಸೇರಿದಂತೆ ಹಲವು ಛತ್ರಗಳನ್ನು ಕ್ವಾರಂಟೈನ್‌ ಕೇಂದ್ರವಾಗಿಸಲು ಹಸ್ತಾಂತರಿಸಿವೆ.ನಿಜಾಮುದ್ದೀನ್‌ ತಬ್ಲೀಗ್‌ ಜಮಾತ್‌ ಸಭೆಯಲ್ಲಿ ಭಾಗವಹಿಸಿದ್ದವರನ್ನೂ ಇಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

‘ಚಿತ್ತೂರಿನ ಶ್ರೀಕಾಳಹಸ್ತಿ ಮತ್ತುಕನಿಪಕಂ ವರಸಿದ್ಧಿ ವಿನಾಯಕ ದೇವಾಲಯಗಳ ಛತ್ರಗಳನ್ನೂ ಬಳಸಿಕೊಳ್ಳಲು ಆಡಳಿತ ಮಂಡಳಿಯು ಬಿಟ್ಟಕೊಟ್ಟಿದೆ.‘ಪದ್ಮಾವತಿ ನಿಲಯದ ಒಂದು ಬ್ಲಾಕ್‌ನ 100 ಕೊಠಡಿ, ಕನಿಪಕಂನಲ್ಲಿ 88 ಕೊಠಡಿಗಳು ಮತ್ತು ಶ್ರೀಕಳಹಸ್ತಿಯಲ್ಲಿ 14 ಕೊಠಡಿಗಳು ಕ್ವಾರಂಟೈನ್‌ಗೆ ಬಳಕೆಯಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ. ಭರತ್‌ ಗುಪ್ತಾ ತಿಳಿಸಿದ್ದಾರೆ.

ADVERTISEMENT

‘ತಬ್ಲೀಗ್‌ಸಭೆಯಲ್ಲಿ ಭಾಗವಹಿಸಿದ್ದ ಹಲವರು ಸೇರಿದಂತೆ 187 ಮಂದಿ ಪ್ರಸ್ತುತ ಪದ್ಮಾವತಿ ನಿಲಯದಲ್ಲಿದ್ದಾರೆ.
ಕನಿಪಕಂನಲ್ಲಿ ಉಳಿದುಕೊಂಡಿದ್ದ ಸುಮಾರು 40 ಮಂದಿಗೆ ಸೋಂಕು ಇಲ್ಲದಿರುವುದು ದೃಢಪಟ್ಟಿದ್ದು ಅವರನ್ನು ಮನೆಗೆ ಕಳುಹಿಸಲಾಗಿದೆ.

‘ಅತಿಥಿಗೃಹಗಳಲ್ಲಿ ಶೌಚಾಲಯಗಳೂ ಕೊಠಡಿಯಲ್ಲೇ ಇರುವುದರಿಂದ ಇವುಗಳು ಕ್ವಾರಂಟೈನ್‌ ಕೇಂದ್ರಗಳನ್ನಾಗಿಸಲು ಸೂಕ್ತ ಎನ್ನುವ ದೃಷ್ಟಿಯಿಂದ, ಇವುಗಳನ್ನು ಬಳಸಿಕೊಳ್ಳಲಾಗಿದೆ’ ಎಂದರು.ತಿರುಪತಿ ದೇವಸ್ಥಾನದ ವಿಷ್ಣವಾಸಂ ಮತ್ತು ಶ್ರೀನಿವಾಸಂ ಮುಂತಾದ ವಿಶ್ರಾಂತಿ ಗೃಹಗಳಲ್ಲಿವಲಸೆ ಕಾರ್ಮಿಕರು ಮತ್ತು ನಿರ್ಗತಿಕರಿಗೆ ಆಶ್ರಯ ಒದಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.