ADVERTISEMENT

ದೆಹಲಿ: ಮಂದಿರ ಮಾರ್ಗ ಪೊಲೀಸ್ ಠಾಣೆ ಎದುರು ಟಿಎಂಸಿ, ಎಎ‍ಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2024, 11:50 IST
Last Updated 9 ಏಪ್ರಿಲ್ 2024, 11:50 IST
<div class="paragraphs"><p>ಟಿಎಂಸಿ</p></div>

ಟಿಎಂಸಿ

   

ನವದೆಹಲಿ: ತೃಣಮೂಲ ಕಾಂಗ್ರೆಸ್‌ ನಾಯಕರು, ಎಎಪಿ ಕಾರ್ಯಕರ್ತರು ಇಲ್ಲಿನ ಮಂದಿರಾ ಮಾರ್ಗ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೇಂದ್ರದ ತನಿಖಾ ಸಂಸ್ಥೆಗಳು ಬಿಜೆಪಿ ಹೇಳಿದಂತೆ ಕೇಳುತ್ತಿವೆ ಕೂಡಲೇ ಆ ಸಂಸ್ಥೆಗಳ ಮುಖ್ಯಸ್ಥರನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ಅವರು ಸೋಮವಾರ ಚುನಾವಣೆ ಆಯೋಗದ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಸೋಮವಾರ ರಾತ್ರಿ ಪೊಲೀಸರು ಅವರಲ್ಲಿ ಕೆಲವರನ್ನು ಬಂಧಿಸಿ ಠಾಣೆಯ ಒಳಗೆ ಇರಿಸಿದ್ದರು. ಮತ್ತೆ ಕೆಲವರನ್ನು ಅಲ್ಲಿಂದ ತೆರವುಗೊಳಿಸಿದ್ದರು.

ADVERTISEMENT

ಮಂಗಳವಾರ ಬೆಳಗ್ಗೆ ಮಂದಿರಾ ಮಾರ್ಗ ಪೊಲೀಸ್‌ ಠಾಣೆಗೆ ಆಗಮಿಸಿದ ಟಿಎಂಸಿ ನಾಯಕರು ಹಾಗೂ ಎಎಪಿ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ.

ಆಡಳಿತಾರೂಢ ಬಿಜೆಪಿ ಆದೇಶದ ಮೇರೆಗೆ ಜಾರಿ ನಿರ್ದೇಶನಾಲಯ, ಕೇಂದ್ರೀಯ ತನಿಖಾ ದಳ, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಆದಾಯ ತೆರಿಗೆ ಇಲಾಖೆಗಳ ಮುಖ್ಯಸ್ಥರು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ಇಂದು ಪ್ರತಿಭಟನಾನಿರತರು ಮತ್ತೆ ಪೊಲೀಸ್ ಠಾಣೆಗೆ ಮರಳಿದ್ದಾರೆ. ಅವರಿಗೆ ಇನ್ನೂ ಹೋಗಲು ಅವಕಾಶವಿದೆ ಆದರೆ ಠಾಣೆಯನ್ನು ತೊರೆಯುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.