ಅಲಿಫಾ ಅಹ್ಮದ್
ಚಿತ್ರಕೃಪೆ: X/@NilanjanDasAITC
ಕಾಳಿಗಂಜ್(ಪಶ್ಚಿಮ ಬಂಗಾಳ): ಜೂನ್ 19ರಂದು ನಡೆಯಲಿರುವ ಕಾಲಿಗಂಜ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಘೋಷಿಸಿರುವ ತೃಣಮೂಲ ಕಾಂಗ್ರೆಸ್, ಅಲಿಫಾ ಅಹ್ಮದ್ ಅವರಿಗೆ ಟಕೆಟ್ ನೀಡಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಟಿಎಂಸಿ, ಅಲಿಫಾ ಅಹ್ಮದ್ ಅವರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದೆ.
ಅಲಿಫಾ ಅವರು ಟಿಎಂಸಿ ಮುಖಂಡ ನಾಸಿರುದ್ದೀನ್ ಅಹ್ಮದ್ ಅವರ ಮಗಳಾಗಿದ್ದು, ತಂದೆಯ ನಿಧನದ ನಂತರ ತೆರವಾಗಿದ್ದ ಕಾಲಿಗಂಜ್ ಕ್ಷೇತ್ರಕ್ಕೆ ಇದೀಗ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
‘ಲಾಲ್ ದಾ’ ಎಂದೇ ಜನಪ್ರಿಯತೆ ಪಡೆದಿರುವ ನಾಸಿರುದ್ದೀನ್ ಅವರು ಇದೇ ವರ್ಷ ಫೆಬ್ರುವರಿಯಲ್ಲಿ ನಿಧನ ಹೊಂದಿದ್ದರು. ಕಾಲಿಗಂಜ್ ಅನ್ನು ಹಲವು ಬಾರಿ ಪ್ರತಿನಿಧಿಸಿರುವ ಅವರು 2011 ಮತ್ತು 2021ರಲ್ಲಿ ಗೆದ್ದಿದ್ದರು. 2016ರಲ್ಲಿ ಅಲ್ಪ ಅಂತರದಲ್ಲಿ ಸೋತಿದ್ದರು.
ರಾಜಕೀಯ ಮಹತ್ವ ಹೊಂದಿರುವ ಕಾಲಿಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 2.5 ಲಕ್ಷ ನೋಂದಾಯಿತ ಮತದಾರರಿದ್ದಾರೆ.
ಕಾಲಿಗಂಜ್ ಕ್ಷೇತ್ರಕ್ಕೆ ಜೂನ್ 19ರಂದು ಮತದಾನ ನಡೆಯಲಿದ್ದು, ಜೂನ್ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.