ADVERTISEMENT

ಮದುರೈ, ತಿರುಚಿಯಲ್ಲಿ ಎರಡು ಬೃಹತ್‌ IT ಪಾರ್ಕ್‌ ನಿರ್ಮಾಣ; 12 ಸಾವಿರ ಉದ್ಯೋಗ

ಪಿಟಿಐ
Published 18 ಫೆಬ್ರುವರಿ 2025, 9:36 IST
Last Updated 18 ಫೆಬ್ರುವರಿ 2025, 9:36 IST
ಎಂ.ಕೆ. ಸ್ಟಾಲಿನ್
ಎಂ.ಕೆ. ಸ್ಟಾಲಿನ್   

ಚೆನ್ನೈ: ತಮಿಳುನಾಡಿನ ಮದುರೈ ಹಾಗೂ ತಿರುಚಿಯಲ್ಲಿ ಎರಡು TIDEL ಪಾರ್ಕ್‌ ನಿರ್ಮಾಣಕ್ಕೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಂಗಳವಾರ ಅಡಿಗಲ್ಲು ಹಾಕಿದರು. 

ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಈ ಎರಡು ಪಾರ್ಕ್‌ಗಳ ನಿರ್ಮಾಣದ ನಂತರ ಒಟ್ಟು 12 ಸಾವಿರ ಉದ್ಯೋಗ ಸೃಜಿಸಲಿದೆ ಎಂದು ಅವರು ಹೇಳಿದ್ದಾರೆ.

ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಪೂರಕ ಸೇವೆ, ಬಿಪಿಒ ಹಾಗೂ ಸ್ಟಾರ್ಟ್‌ ಅಪ್ ಕಂಪನಿಗಳಿಗೆ ಇಲ್ಲಿ ಅವಕಾಶ ನೀಡಲಾಗುವುದು. ತಿರುಚಿ ಸಮೀಪದ ಪಂಜಪ್ಪೂರ್‌ ಬಳಿ 5.58 ಲಕ್ಷ ಚದರಡಿ ಜಾಗದಲ್ಲಿ ₹403 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಮದುರೈನಲ್ಲಿ 5.34 ಲಕ್ಷ ಚದರಡಿ ಜಾಗದಲ್ಲಿ ₹314 ಕೋಟಿ ವೆಚ್ಚದಲ್ಲಿ TIDEL ಪಾರ್ಕ್ ನಿರ್ಮಾಣವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.