ADVERTISEMENT

ತಮಿಳುನಾಡು ಚುನಾವಣೆ: ಟಿಕೆಟ್‌ಗಾಗಿ ಸಂದರ್ಶನ ಎದುರಿಸಿದ ಸ್ಟಾಲಿನ್ ಪುತ್ರ

ಏಜೆನ್ಸೀಸ್
Published 7 ಮಾರ್ಚ್ 2021, 6:58 IST
Last Updated 7 ಮಾರ್ಚ್ 2021, 6:58 IST
ಡಿಎಂಕೆ ಯೂತ್ ವಿಂಗ್ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್
ಡಿಎಂಕೆ ಯೂತ್ ವಿಂಗ್ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್   

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಬಿರುಸಿನ ಚುನಾವಣಾ ಚಟುವಟಿಕೆಯಲ್ಲಿ ತೊಡಗಿವೆ. ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲಿ ನಿರತವಾಗಿವೆ.

ಈ ಮಧ್ಯೆ ಶನಿವಾರ ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷ ಡಿಎಂಕೆಯ ಅಧ್ಯಕ್ಷ ಎಂ ಕೆ ಸ್ಟಾಲಿನ್ ಪುತ್ರ, ಡಿಎಂಕೆ ಯೂತ್ ವಿಂಗ್ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಪಕ್ಷದ ಟಿಕೆಟ್‌ ಪಡೆದುಕೊಳ್ಳಲು ಸಂದರ್ಶನ ಎದುರಿಸಿದ್ದಾರೆ.

ಡಿಎಂಕೆ ಪಕ್ಷದ ಟಿಕೆಟ್ ಪಡೆದುಕೊಳ್ಳುವ ಆಕಾಂಕ್ಷಿಗಳು ಡಿಎಂಕೆ ಚುನಾವಣಾ ಸಮಿತಿಯ ಎದುರು ಹಾಜರಾಗಿ ಸಂದರ್ಶನ ಎದುರಿಸುವುದು ಕಡ್ಡಾಯವಾಗಿದೆ. ಅದರಂತೆ ತಮಿಳುನಾಡಿನ ಚೆನ್ನೈನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಶನಿವಾರ ಸಂದರ್ಶನ ನಡೆದಿದೆ.

ADVERTISEMENT

ಉದಯನಿಧಿ ಸ್ಟಾಲಿನ್ ಚೆನ್ನೈ-ಚೆಪಕ್ ವಿಧಾನಸಭಾ ಕ್ಷೇತ್ರದಿಂದ ಡಿಎಂಕೆ ಪಕ್ಷದ ಟಿಕೆಟ್ ಬಯಸಿದ್ದಾರೆ. ಪಕ್ಷ ಅವರಿಗೆ ಟಿಕೆಟ್ ನೀಡುವ ಕುರಿತು ಇನ್ನಷ್ಟೆ ನಿರ್ಧರಿಸಿ ಪ್ರಕಟಿಸಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.