ADVERTISEMENT

ಎಂಥಾ ಮಾತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಏಪ್ರಿಲ್ 2024, 0:03 IST
Last Updated 1 ಏಪ್ರಿಲ್ 2024, 0:03 IST
ಪೀಯೂಷ್‌ ಗೋಯಲ್‌
ಪೀಯೂಷ್‌ ಗೋಯಲ್‌   

ಇಂದಿನ ಯುವಕರು ಸರ್ಕಾರಿ ಹುದ್ದೆಯ ಹಿಂದೆ ಓಡುತ್ತಿಲ್ಲ. ಅವರು ತಮ್ಮ ಪ್ರತಿಭೆಯನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಸುತ್ತಿದ್ದಾರೆ. ಹೊಸ ಪ್ರಯೋಗ ಮತ್ತು ಆವಿಷ್ಕಾರಗಳ ಮೂಲಕ ದೇಶವನ್ನು ಮುನ್ನಡೆಸುತ್ತಿದ್ದಾರೆ. ದೇಶದ ಆರ್ಥಿಕತೆಯನ್ನು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಲ್ಲಿ ದೃಢವಾದ ಹೆಜ್ಜೆಗಳನ್ನು ಮುಂದಿಟ್ಟಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಆಡಳಿತ ನೀಡಲು ಪ್ರಯತ್ನಿಸಿದ್ದಾರೆ. 2047ರ ಹೊತ್ತಿಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ

- ಪೀಯೂಷ್‌ ಗೋಯಲ್‌, ಕೇಂದ್ರ ಸಚಿವ

ಆಡಳಿತಾರೂಢ ಬಿಜೆಪಿಯು ದೇಶವನ್ನು ಹಲವು ತುಂಡುಗಳಾಗಿ ಒಡೆಯಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಸಿಎಎಯನ್ನು ಜಾರಿಗೊಳಿಸಿದೆ. ಲೋಕಸಭಾ ಚುನಾವಣೆ ವೇಳೆ ಆ ಪಕ್ಷದ ಪೊಳ್ಳು ಭರವಸೆಗಳಿಗೆ ಜನರು ಮರುಳಾಗಬೇಡಿ. ಬಿಜೆಪಿಯು ವಿರೋಧಪಕ್ಷಗಳ ಒಗ್ಗಟ್ಟನ್ನು ಬಯಸುವುದಿಲ್ಲ. ಈ ದೇಶವು 140 ಕೋಟಿ ಜನರಿಗೆ ಸೇರಿದ್ದು, ಯಾವುದೋ ಒಂದು ಪಕ್ಷದ ಸೊತ್ತಲ್ಲ

ADVERTISEMENT

-ಭಗವಂತ ಮಾನ್‌, ಪಂಜಾಬ್‌ ಮುಖ್ಯಮಂತ್ರಿ

ಭಗವಂತ ಮಾನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.