ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 24 ಆಗಸ್ಟ್‌ 2023

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಆಗಸ್ಟ್ 2023, 13:32 IST
Last Updated 24 ಆಗಸ್ಟ್ 2023, 13:32 IST
Top 10 News
Top 10 News   

ಚಂದ್ರಯಾನ–3 ವಿಕ್ರಮ್ ಲ್ಯಾಂಡರ್‌ನಿಂದ ಹೊರಬಂದ ರೋವರ್ ಪ್ರಗ್ಯಾನ್, ಟಿವಿಎಸ್ ಬೈಕ್ ಷೋ ರೂಂಗೆ ಬೆಂಕಿ, ನಟಿ ಹರ್ಷಿಕಾ ಪೂಣಚ್ಚ ಮದುವೆ ಸೇರಿದಂತೆ ಈ ದಿನದ 10 ಪ್ರಮುಖ ಸುದ್ದಿಗಳು ಇಲ್ಲಿವೆ.

ಗೃಹಲಕ್ಷ್ಮಿ ಯೋಜನೆ ಬೆಳಗಾವಿಯಿಂದ ಸ್ಥಳಾಂತರ: ರಾಜಕೀಯವಿಲ್ಲ– ಡಿಕೆಶಿ

DK Shivakumar 

‘ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಸಮಾರಂಭವನ್ನು ಬೆಳಗಾವಿಯಿಂದ ಮೈಸೂರಿಗೆ ಸ್ಥಳಾಂತರಿಸಿದ ವಿಚಾರದಲ್ಲಿ ಯಾವ ರಾಜಕೀಯವೂ ಇಲ್ಲ. ಅಲ್ಲಿ ಇನ್ನೊಂದು ಕಾರ್ಯಕ್ರಮಕ್ಕೆ ಯೋಜಿಸುತ್ತಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಹೊಳೆಹೊನ್ನೂರಿನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿ- ಪಂಡರಹಳ್ಳಿಯ ಇಬ್ಬರ ಬಂಧನ

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಪಟ್ಟಣದಲ್ಲಿ ಆಗಸ್ಟ್ 21ರ ಬೆಳಗಿನ ಜಾವ ಮಹಾತ್ಮಾ ಗಾಂಧಿ ಪ್ರತಿಮೆಗೆ ಹಾನಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ಹೊಳೆಹೊನ್ನೂರಿನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿ- ಪಂಡರಹಳ್ಳಿಯ ಇಬ್ಬರ ಬಂಧನ

ಶಾಸಕರ ಮನೆಯ ಆವರಣದ ಮರದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆ

ಕಲಬುರಗಿ: ಇಲ್ಲಿನ ಶರಣನಗರದಲ್ಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಅಧ್ಯಕ್ಷರೂ ಆಗಿರುವ ಶಾಸಕ ಡಾ. ಅಜಯ್ ಸಿಂಗ್ ಅವರ ನಿವಾಸದ ಆವರಣದಲ್ಲಿ ‌ಗುರುವಾರ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಸಂಪೂರ್ಣ ಸುದ್ದಿ ಓದಲು: ಶಾಸಕರ ಮನೆಯ ಆವರಣದ ಮರದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆ

ಶ್ರೀಲಂಕಾದಲ್ಲಿ‌ ಅಪರಾಧ ಎಸಗಿ ಭಾರತಕ್ಕೆ ಅಕ್ರಮ ‌ಪ್ರವೇಶ: ಬೆಂಗಳೂರಿನಲ್ಲಿ‌ ಸಿಕ್ಕಿಬಿದ್ದ ಮೂವರು

ಬೆಂಗಳೂರು: ಶ್ರೀಲಂಕಾದಲ್ಲಿ‌ ಅಪರಾಧ ಎಸಗಿ ಭಾರತದೊಳಗೆ ಅಕ್ರಮಮವಾಗಿ ನುಸುಳಿದ್ದ ಮೂವರು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಯಲಹಂಕದ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಮೇಲೆ ಸಿಸಿಬಿ ಪೊಲೀಸರು ಬುಧವಾರ ರಾತ್ರಿ ದಾಳಿ ಮಾಡಿದ್ದು, ಅಲ್ಲಿಯ ಫ್ಲ್ಯಾಟ್‌ನಲ್ಲಿದ್ದ ಮೂವರನ್ನು ಬಂಧಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ಶ್ರೀಲಂಕಾದಲ್ಲಿ‌ ಅಪರಾಧ ಎಸಗಿ ಭಾರತಕ್ಕೆ ಅಕ್ರಮ ‌ಪ್ರವೇಶ: ಬೆಂಗಳೂರಿನಲ್ಲಿ‌ ಸಿಕ್ಕಿಬಿದ್ದ ಮೂವರು

TVS ಬೈಕ್‌ ಶೋ ರೂಂಗೆ ಬೆಂಕಿ: ಸುಟ್ಟು ಕರಕಲಾದ 300ಕ್ಕೂ ಅಧಿಕ ದ್ವಿಚಕ್ರ ವಾಹನ

ವಿಜಯವಾಡ (ಆಂಧ್ರ ಪ್ರದೇಶ): ನಗರದಲ್ಲಿರುವ ಟಿವಿಎಸ್‌ ಬೈಕ್‌ ಶೋ ರೂಂನಲ್ಲಿ ಗುರುವಾರ ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, 300ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಆದರೆ, ಅಂದಾಜು ₹ 15 ಕೋಟಿ ನಷ್ಟ ಉಂಟಾಗಿದೆ ಎಂದು ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಲು: TVS ಬೈಕ್‌ ಶೋ ರೂಂಗೆ ಬೆಂಕಿ: ಸುಟ್ಟು ಕರಕಲಾದ 300ಕ್ಕೂ ಅಧಿಕ ದ್ವಿಚಕ್ರ ವಾಹನ

ಸೂರ್ಯನಲ್ಲಿಗೆ ಇಸ್ರೊ; ಸೆಪ್ಟೆಂಬರ್‌ನಲ್ಲಿ ಆದಿತ್ಯ ಯೋಜನೆ: ಸೋಮನಾಥ್

Isro chairman S Somanath 

ಬೆಂಗಳೂರು: ಚಂದ್ರಯಾನ-3ರ ಯಶಸ್ಸಿನ ಬೆನ್ನಲ್ಲೇ ಮುಂದಿನ ಯೋಜನೆ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎಸ್. ಸೋಮನಾಥ್ ವಿವರಣೆ ನೀಡಿದ್ದಾರೆ. ಸೂರ್ಯನ ಅಧ್ಯಯನಕ್ಕಾಗಿ ಸೆಪ್ಟೆಂಬರ್‌ ತಿಂಗಳ ಮೊದಲ ವಾರದಲ್ಲಿ 'ಆದಿತ್ಯ ಎಲ್-1' ಉಪಗ್ರಹ ಉಡಾವಣೆಗೆ ಸಿದ್ಧವಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ಸೂರ್ಯನಲ್ಲಿಗೆ ಇಸ್ರೊ; ಸೆಪ್ಟೆಂಬರ್‌ನಲ್ಲಿ ಆದಿತ್ಯ ಯೋಜನೆ: ಸೋಮನಾಥ್

ಆ್ಯನಿಮೇಟೆಡ್ ಡೂಡಲ್‌ ಮೂಲಕ ಚಂದ್ರಯಾನ-3 ಯಶಸ್ಸನ್ನು ಸಂಭ್ರಮಿಸಿದ ಗೂಗಲ್

ಬೆಂಗಳೂರು: ಚಂದ್ರಯಾನ–3 ಯಶಸ್ವಿ ಕಾರ್ಯಾಚರಣೆ ಮೂಲಕ ಚಂದ್ರನ ದಕ್ಷಿಣ ಧ್ರುವದ ಮೇಲೆ ಅಡಿ ಇಟ್ಟ ವಿಶ್ವದ ಮೊದಲ ಮತ್ತು ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತದ ಸಾಧನೆಯನ್ನು ಗೂಗಲ್ ವಿಶೇಷ ಆ್ಯನಿಮೇಟೆಡ್ ಸಂಭ್ರಮಿಸಿದೆ. ಅಲ್ಲದೆ, ಈ ಕಾರ್ಯಾಚರಣೆಯಲ್ಲಿ ಶ್ರಮ ವಹಿಸಿದ ಇಸ್ರೊ ವಿಜ್ಞಾನಿಗಳಿಗೂ ಗೂಗಲ್ ಶುಭಾಶಯ ತಿಳಿಸಿದೆ.

ಸಂಪೂರ್ಣ ಸುದ್ದಿ ಓದಲು: ಆ್ಯನಿಮೇಟೆಡ್ ಡೂಡಲ್‌ ಮೂಲಕ ಚಂದ್ರಯಾನ-3 ಯಶಸ್ಸನ್ನು ಸಂಭ್ರಮಿಸಿದ ಗೂಗಲ್

Chandrayaan-3: ಇಸ್ರೊ ವಿಜ್ಞಾನಿಗಳನ್ನು ಭೇಟಿ ಮಾಡಿ ಅಭಿನಂದಿಸಿದ ಸಿದ್ದರಾಮಯ್ಯ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್‌ ಸಾಫ್ಟ್ ಲ್ಯಾಂಡ್ ಆಗಿದೆ. ದೇಶದೆಲ್ಲೆಡೆ ಸಂತಸ ಮನೆಮಾಡಿದ್ದು, ಗಣ್ಯರು ಸೇರಿದಂತೆ ದೇಶದ ಜನತೆ ಇಸ್ರೊ ವಿಜ್ಞಾನಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಲು: Chandrayaan-3: ಇಸ್ರೊ ವಿಜ್ಞಾನಿಗಳನ್ನು ಭೇಟಿ ಮಾಡಿ ಅಭಿನಂದಿಸಿದ ಸಿದ್ದರಾಮಯ್ಯ

ಕೊಡವ ಸಂಪ್ರದಾಯದಂತೆ ಹಸೆಮಣೆಯೇರಿದ ನಟಿ ಹರ್ಷಿಕಾ ಪೂಣಚ್ಚ–ಭುವನ್ ಪೊನ್ನಣ್ಣ

ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಮತ್ತು ಬಿಗ್‌ಬಾಸ್‌ ಖ್ಯಾತಿಯ ಭುವನ್‌ ಪೊನ್ನಣ್ಣ ಕೊಡವ ಸಂಪ್ರದಾಯದಂತೆ ಇಂದು ಹಸೆಮಣೆ ಏರಿದ್ದು, 10 ವರ್ಷದ ಪ್ರೀತಿಗೆ ದಾಂಪತ್ಯದ ಬಂಧ ಬಿಗಿದಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿಯ ಕೊಡವ ಸಮಾಜದಲ್ಲಿ ವಿವಾಹ ನೆರವೇರಿದ್ದು, ಚಿತ್ರರಂಗದ ಅನೇಕರು ಮದುವೆಯಲ್ಲಿ ಭಾಗಿಯಾಗಿ ದಂಪತಿಗೆ ಶುಭಹಾರೈಸಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ಕೊಡವ ಸಂಪ್ರದಾಯದಂತೆ ಹಸೆಮಣೆಯೇರಿದ ನಟಿ ಹರ್ಷಿಕಾ ಪೂಣಚ್ಚ–ಭುವನ್ ಪೊನ್ನಣ್ಣ

Chandrayaan–3: ಲ್ಯಾಂಡರ್‌ನಿಂದ ಹೊರಬಂದ ರೋವರ್‌, ಚಂದ್ರನ ಮೇಲೆ ಚಲನೆ ಆರಂಭ

ಚೆನ್ನೈ: ಚಂದ್ರನ ಮೇಲ್ಮೈ ಮೇಲೆ ವಿಕ್ರಮ್‌ ಲ್ಯಾಂಡರ್‌ ಬುಧವಾರ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದೆ. ಇದೀಗ ಮುಂದಿನ ಹಂತ ಆರಂಭವಾಗಿದೆ.


Chandrayaan–3: ಲ್ಯಾಂಡರ್‌ನಿಂದ ಹೊರಬಂದ ರೋವರ್‌, ಚಂದ್ರನ ಮೇಲೆ ಚಲನೆ ಆರಂಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.