ಬಂಧನ ( ಸಾಂಕೇತಿಕ ಚಿತ್ರ)
ತಿರುವಣ್ಣಾಮಲೈ: ಇಲ್ಲಿನ ದೇವಾಲಯವೊಂದರಲ್ಲಿ ಫ್ರೆಂಚ್ ಪ್ರವಾಸಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಖಾಸಗಿ ಪ್ರವಾಸಿ ಮಾರ್ಗದರ್ಶಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಮಾರ್ಗದರ್ಶಿ ವೆಂಕಟೇಶನ್ (42) ಎಂಬಾತ ಫ್ರೆಂಚ್ ಮೂಲದ ಮಹಿಳೆಯೊಬ್ಬರನ್ನು ಅರುಣಾಚಲ ಬೆಟ್ಟದ ತುದಿಗೆ ಧ್ಯಾನಕ್ಕಾಗಿ ಕರೆದೊಯ್ದು ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಅವರು ಹೇಳಿದ್ದಾರೆ.
ಕೃತ್ಯ ಎಸಗುವ ವೇಳೆ ಸಂತ್ರಸ್ತೆಯು ಕಿರುಚಿಕೊಂಡಿದ್ದು, ಅಲ್ಲೇ ಹಾದುಹೋಗುತ್ತಿದ್ದ ಭಕ್ತರು ಆಕೆಯನ್ನು ರಕ್ಷಿಸಿದ್ದಾರೆ. ಬಳಿಕ, ಘಟನೆ ಕುರಿತು ಆಕೆ ಫ್ರೆಂಚ್ ಕಾನ್ಸುಲೇಟ್‌ಗೆ ಮಾಹಿತಿ ನೀಡಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ಪ್ರಕರಣದ ಕುರಿತು ಚರ್ಚಿಸಲಾಗಿದೆ. ಬುಧವಾರ ಮಹಿಳಾ ಪೊಲೀಸರು ಆರೋಪಿ ವೆಂಕಟೇಶನ್ ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಧ್ಯಾತ್ಮಿಕ ಪ್ರವಾಸಕ್ಕಾಗಿ ಜನವರಿಯಲ್ಲಿ ದೇಶಕ್ಕೆ ಭೇಟಿ ನೀಡಿದ್ದ ಫ್ರೆಂಚ್ ಮೂಲದ ಮಹಿಳೆಯನ್ನು ಮಾರ್ಗದರ್ಶಿ ವಿವಿಧ ಆಶ್ರಮಗಳಿಗೆ ಕರೆದೊಯ್ದಿದ್ದಾನೆ. ಆಕೆ ತಿರುವಣ್ಣಾಮಲೈನ ಖಾಸಗಿ ಲಾಡ್ಜ್‌ವೊಂದರಲ್ಲಿ ತಂಗಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.