ADVERTISEMENT

‘ಟ್ರೈನ್ 18’ ಮೇಲೆ ಕಲ್ಲುತೂರಾಟ

ಪ್ರಾಯೋಗಿಕ ಸಂಚಾರ ನಡೆಸುತ್ತಿದ್ದ ಅತಿ ವೇಗದ ರೈಲು

ಪಿಟಿಐ
Published 20 ಡಿಸೆಂಬರ್ 2018, 19:43 IST
Last Updated 20 ಡಿಸೆಂಬರ್ 2018, 19:43 IST
   

ನವದೆಹಲಿ: ದೇಶದ ಮೊದಲ ಅತಿವೇಗದ ರೈಲು ‘ಟ್ರೈನ್ 18’ ಗುರುವಾರ ಪ್ರಾಯೋಗಿಕ ಸಂಚಾರ ನಡೆಸುತ್ತಿದ್ದ ವೇಳೆ ಯಾರೋ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ. ಇದರಿಂದ ರೈಲಿನ ಗಾಜು ಒಡೆದುಹೋಗಿದೆ.

‘ದೆಹಲಿ ಮತ್ತು ಆಗ್ರಾ ನಡುವಿನ ಮಾರ್ಗದಲ್ಲಿ ಗಂಟೆಗೆ 180 ಕಿ.ಮೀ ವೇಗದಲ್ಲಿ ರೈಲು ಸಂಚರಿಸುತ್ತಿತ್ತು.ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯ (ಐಸಿಎಫ್‌) ಮುಖ್ಯ ವಿನ್ಯಾಸಕಾರ ಶ್ರೀನಿವಾಸ್ ರೈಲಿನಲ್ಲಿದ್ದರು. ಬಳಿಕ, ದಾಖಲೆಯ ಸಲುವಾಗಿ ರೈಲು ಗಂಟೆಗೆ 181 ಕಿ.ಮೀ ವೇಗ ತಲುಪಿತ್ತು. ಆ ವೇಳೆಗೆ ಈ ಘಟನೆ ನಡೆದಿದೆ. ಕಿಡಿಗೇಡಿಗಳನ್ನು ಪತ್ತೆಮಾಡುವ ವಿಶ್ವಾಸವಿದೆ’ ಎಂದು ಐಸಿಎಫ್‌ ಪ್ರಧಾನ ನಿರ್ವಾಹಕ ಸುಧಾಂಶು ಮನು ಅವರು ಟ್ವೀಟ್ ಮಾಡಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT