ರೈಲು ಹಳಿ
ಬೇಗುಸರಾಯ್, (ಬಿಹಾರ): ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿ ತಾಯಿ, ಮಗಳು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಬೇಗುಸರಾಯ್ ಜಿಲ್ಲೆಯ ಭರೌನಿ–ಕತಿಹಾರ್ ರೈಲು ನಿಲ್ದಾಣಗಳ ಮಧ್ಯೆ ಈ ದುರ್ಘಟನೆ ಸಂಭವಿಸಿದೆ ಎಂದು ಸಾಹೇಬ್‌ಪುರ ಕಮಲ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಮೃತರನ್ನು ರಾಹುವಾ ಎಂಬ ಹಳ್ಳಿಯ ರೀಟಾ ದೇವಿ (40) ಮತ್ತು ಅವರ ಮಗಳು ರೋಶನಿ ಕುಮಾರಿ (14) ಹಾಗೂ ಅದೇ ಊರಿನವರಾದ ಆರೋಹಿ (7) ಹಾಗೂ ಧರ್ಮದೇವ್ ಮೆಹತೋ (36) ಎಂದು ಗುರುತಿಸಲಾಗಿದೆ.
ಈ ನಾಲ್ವರೂ ದೀಪಾವಳಿ ಪ್ರಯುಕ್ತ ತಮ್ಮ ಗ್ರಾಮದ ಬಳಿ ಆಯೋಜಿಸಿದ್ದ ಜಾತ್ರೆ ಮುಗಿಸಿಕೊಂಡು ರೈಲು ಹಳಿ ದಾಟಿ ವಾಪಸ್ ಮನೆ ಕಡೆಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರೈಲು ಬರುವುದನ್ನು ಸರಿಯಾಗಿ ಗಮನಿಸದೇ ಹೋಗಿದ್ದರಿಂದ ಘಟನೆ ಸಂಭವಿಸಿದೆ. ಮೃತದೇಹಗಳನ್ನು ಗುರುತಿಸಿ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.