ADVERTISEMENT

ಸ್ಥಗಿತಗೊಂಡಿದ್ದ ರೈಲು ಸಂಚಾರ ಮಂಗಳವಾರದಿಂದ ಆರಂಭ, ಕಂಡೀಷನ್ಸ್ ಅಪ್ಲೈ

​ಪ್ರಜಾವಾಣಿ ವಾರ್ತೆ
Published 10 ಮೇ 2020, 17:42 IST
Last Updated 10 ಮೇ 2020, 17:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಯಾಣಿಕರ ಸಂಚಾರ ರೈಲನ್ನು ಮಂಗಳವಾರದಿಂದ ಆರಂಭಿಸಲು ಭಾರತೀಯ ರೈಲ್ವೆ ಇಲಾಖೆ ತೀರ್ಮಾನಿಸಿದೆ.
ಸೋಮವಾರದಿಂದ ಆನ್‌ಲೈನ್ ಬುಕಿಂಗ್ ಸೋಮವಾರದಿಂದ ಆರಂಭಿಸಲಾಗುವುದು ರೈಲ್ವೆ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಆರಂಭದಲ್ಲಿ 15 ಜೋಡಿ ರೈಲುಗಳು ಸಂಚರಿಸಲಿದ್ದು, ಈ ರೈಲುಗಳು ವಿಶೇಷ ರೈಲುಗಳಾಗಿ ಸಂಚರಿಸಲಿವೆ. ಇವುಗಳು ದಿಬ್ರುಘರ್, ಅಗರ್ತಲ, ಹೌರಾ, ಪಾಟ್ನಾ, ಬಿಲಾಸ್ ಪುರ್, ರಾಂಚಿ, ಭುವನೇಶ್ವರ್,ಸಿಖಂದರಾಬಾದ್, ಬೆಂಗಳೂರು, ಚನ್ನೈ,ತಿರುವನಂತಪುರ, ಮಡಗಾವ್, ಸೆಂಟ್ರಲ್ ಮುಂಬೈ, ಅಹಮದಾಬಾದ್ ಮತ್ತು ಜಮ್ಮುವಿನ ನಡುವೆ ಸಂಚರಿಸಲಿವೆ.

ನಂತರ, ಕೋವಿಡ್ -19 ಆರೈಕೆ ಕೇಂದ್ರಗಳಿಗೆ 20,000 ಬೋಗಿಗಳನ್ನು ಕಾಯ್ದಿರಿಸಿದ ನಂತರ ಲಭ್ಯವಿರುವಬೋಗಿಗಳ ಆಧಾರದ ಮೇಲೆ ಭಾರತೀಯ ರೈಲ್ವೆ ಹೊಸ ಮಾರ್ಗಗಳಲ್ಲಿ ಹೆಚ್ಚಿನ ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸುತ್ತದೆ. ವಲಸೆ ಕಾರ್ಮಿಕರಿಗಾಗಿ ಮೀಸಲಿರುವ ಶ್ರಮಿಕ್ ಸ್ಪೆಷಲ್ ರೈಲುಗಳಾಗಿಪ್ರತಿದಿನ 300 ರೈಲು ಸಂಚಾರ ಆರಂಭಿಸಲು ಸಾಕಷ್ಟು ಸಂಖ್ಯೆಯ ಬೋಗಿಗಳನ್ನು ಕಾಯ್ದಿರಿಸಲಾಗಿದೆ.

ADVERTISEMENT

ವಿಶೇಷ ರೈಲುಗಳಿಗೆ ಆನ್‌ಲೈನ್ ಬುಕ್ಕಿಂಗ್ ಸೋಮವಾರ 4 ಗಂಟೆಯಿಂದಲೇ ಆರಂಭಿಸಲಾಗುವುದು. ಈ ಬುಕ್ಕಿಂಗ್ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಮಾತ್ರ ಲಭ್ಯವಿರುತ್ತದೆ.ರೈಲು ನಿಲ್ದಾಣಗಳಲ್ಲಿ ಯಾವುದೇ ಟಿಕೆಟ್ ಕೌಂಟರ್ ಇರುವುದಿಲ್ಲ. ಕೇವಲ ಅಧಿಕೃತ ಟಿಕೆಟ್ ಹೊಂದಿರುವ ಪ್ರಯಾಣಿಕರನ್ನು ಮಾತ್ರ ರೈಲು ನಿಲ್ದಾಣದ ಒಳಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಎಲ್ಲಾ ಕೋಚ್‌ಗಳು ಹವಾನಿಯಂತ್ರಿತ ಕೋಚ್‌ಗಳಾಗಿದ್ದು, ಟಿಕೆಟ್ ದರ ರಾಜಧಾನಿ ಹವಾನಿಯಂತ್ರಿತ ರೈಲಿನಲ್ಲಿ ವಿಧಿಸುತ್ತಿದ್ದ ಟಿಕೆಟ್ ದರದಂತೆಯೇ ಇರುತ್ತದೆ.ರೈಲು ನಿಲ್ದಾಣಗಳ ಒಳಪ್ರವೇಶಿಸುವ ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ, ಅಲ್ಲದೆ, ನಿಲ್ದಾಣದಲ್ಲಿ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ನಡೆಸಲಾಗುತ್ತದೆ. ಅಲ್ಲಿ ಕೊರೊನಾ ಸೋಂಕು ಗುಣಲಕ್ಷಣಗಳು ಕಂಡು ಬಂದರೆ
ಅಂತಹ ಪ್ರಯಾಣಿಕರಿಗೆ ಪ್ರಯಾಣಕ್ಕೆ ಅವಕಾಶವಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಮಾರ್ಚ್ 25ರಂದು ಲಾಕ್‌‌ಡೌನ್ ಆರಂಭವಾದ ನಂತರ ಪ್ರಯಾಣಿಕರ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.