ADVERTISEMENT

ವಿದೇಶದಿಂದ ಬರುವವರಿಗೆ 14 ದಿನಗಳ ಕ್ವಾರಂಟೈನ್‌ ಕಡ್ಡಾಯ: ನೀಡಬೇಕು ಪ್ರಮಾಣ

​ಪ್ರಜಾವಾಣಿ ವಾರ್ತೆ
Published 24 ಮೇ 2020, 13:46 IST
Last Updated 24 ಮೇ 2020, 13:46 IST
   

ನವದೆಹಲಿ: ವಿದೇಶದಿಂದ ಭಾರತಕ್ಕೆ ಆಗಮಿಸುತ್ತಿರುವವರು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಭಾನುವಾರ ಬಿಡುಗಡೆ ಮಾಡಿದೆ. ದೇಶಕ್ಕೆ ಬಂದ ನಂತರ ಎಲ್ಲರೂ 14 ದಿನಗಳವರೆಗೆಕ್ವಾರಂಟೈನ್‌ನಲ್ಲಿ ಉಳಿಯುವುದಾಗಿ ಕಡ್ಡಾಯವಾಗಿಭರವಸೆನೀಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ದೇಶಕ್ಕೆ ಬಂದ ಕೂಡಲೇ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕು. ಸ್ವಂತ ಖರ್ಚಿನಲ್ಲಿ 7 ದಿನಗಳ ಕಾಲಸಾಂಸ್ಥಿಕ ಕ್ವಾರಂಟೈನ್‌ ನಂತರ 7 ದಿನಗಳ ಕಾಲಮನೆಯಲ್ಲೇ ಪ್ರತ್ಯೇಕವಾಸ ಇರಬೇಕಾಗುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕಾಯಿಲೆ, ಗರ್ಭಾವಸ್ಥೆ, ಕುಟುಂಬದಲ್ಲಿ ಸಾವು, ಗಂಭೀರ ಅನಾರೋಗ್ಯ ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿರುವ ಕುಟುಂಬ ನಿರ್ವಹಣೆ ಸೇರಿದಂತೆ ಬಲವಾದ, ಅಸಾಧಾರಣ ಕಾರಣವಿದ್ದಾಗ ಮಾತ್ರ14 ದಿನಗಳ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ. ಆದರೆ, ಆರೋಗ್ಯ ಸೇತು ಆ್ಯಪ್‌ ಅನ್ನು ಕಡ್ಡಾಯವಾಗಿ ಫೋನ್‌ ಅನುಸ್ಥಾಪಿಸಿಕೊಳ್ಳಬೇಕಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.