ADVERTISEMENT

ಭಾರತ-ಚೀನಾ ಗಡಿಯಲ್ಲಿ 73 ಅಡಿ ಎತ್ತರದ ಧ್ವಜಸ್ತಂಭದಲ್ಲಿ ತ್ರಿವರ್ಣ ಧ್ವಜ ಹಾರಾಟ

ಪಿಟಿಐ
Published 8 ಜನವರಿ 2025, 13:40 IST
Last Updated 8 ಜನವರಿ 2025, 13:40 IST
<div class="paragraphs"><p>ತ್ರಿವರ್ಣ ಧ್ವಜ</p></div>

ತ್ರಿವರ್ಣ ಧ್ವಜ

   

ಇಟಾನಗರ: ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಭಾರತ-ಚೀನಾ ಗಡಿ ಸಮೀಪದಲ್ಲಿ 73 ಅಡಿ ಎತ್ತರದ ಧ್ವಜಸ್ತಂಭದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು.

ಭಾರತ-ಚೀನಾ ಗಡಿಯ ಸಮೀಪದಲ್ಲಿರುವ ಮೊದಲ ಆಡಳಿತ ಕೇಂದ್ರವಾದ ಝೆಮಿಥಾಂಗ್‌ನ ಗೋರ್‌ಸಮ್ ಚೋರ್ಟೆನ್‌ನಲ್ಲಿ ಇಂದು (ಬುಧವಾರ) ಧ್ವಜಾರೋಹಣ ನೆರವೇರಿಸಲಾಯಿತು.

ADVERTISEMENT

ಭಾರತೀಯ ಸೇನೆ, ಸ್ಥಳೀಯಾಡಳಿತ ಮತ್ತು 200ಕ್ಕೂ ಹೆಚ್ಚು ಸ್ಥಳೀಯರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ನೇತಾರರು, ಸ್ಥಳೀಯರು, ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಚೀನಾ, ಭೂತಾನ್‌ ಗಡಿಯೊಂದಿಗೆ ಹೊಂದಿಕೊಂಡಿರುವ ಈ ಪ್ರಕೃತಿ ರಮಣೀಯ ಪ್ರದೇಶದಲ್ಲಿ ಎತ್ತರದ ಧ್ವಜಸ್ತಂಭದಲ್ಲಿ ತ್ರಿವರ್ಣ ಧ್ವಜ ರಾರಾಜಿಸುವುದರೊಂದಿಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.