
ನವದೆಹಲಿ: ಡೆಹ್ರಾಡೂನ್‌ನಲ್ಲಿ ತ್ರಿಪುರಾದ ವಿದ್ಯಾರ್ಥಿಯೊಬ್ಬರನ್ನು ಹತ್ಯೆ ಮಾಡಿರುವುದು ‘ದ್ವೇಷಪೂರಿತವಾದ ಭಯಾನಕ ಕೃತ್ಯ‘ ಎಂದು ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ
‘ಕೆಲ ಭಾರತೀಯರನ್ನು ಗುರಿಯಾಗಿಸಿಕೊಂಡಾಗ ದೂರ ಓಡುವಂಥ ಸತ್ತ ಸಮಾಜ ನಾವಾಗಬಾರದು. ನಮ್ಮ ದೇಶ ಏನಾಗಬೇಕೆಂದು ನಾವು ಬಯಸಿದ್ದೇವು ಅದಕ್ಕಾಗಿ ಹೋರಾಡಬೇಕು ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ದ್ವೇಷವು ರಾತ್ರೋರಾತ್ರಿ ಉದ್ಭವಿಸುವುದಿಲ್ಲ. ಯುವಕರ ತಲೆಯಲ್ಲಿ ವಿಷ ಬೀಜ ಮತ್ತು ಬೇಜವಾಬ್ದಾರಿಯುತ ವಿಚಾರಗಳನ್ನು ವರ್ಷಾನುಗಟ್ಟಲೆ ತುಂಬುವ ಮೂಲಕ ದ್ವೇಷವನ್ನು ಹರಡಲಾಗುತ್ತಿದೆ’ ಎಂದು ರಾಹುಲ್ ಆರೋಪಿಸಿದರು.
ದ್ವೇಷ ಕೃತ್ಯದ ಬಗ್ಗೆ ಗೃಹ ಸಚಿವ ಅಮಿತ್ ಶಾ ಮಾತನಾಡಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಆಗ್ರಹಿಸಿದ್ದಾರೆ.
ಜನಾಂಗೀಯ ನಿಂದನೆಯನ್ನು ಆಕ್ಷೇಪಿಸಿದ್ದ ತ್ರಿಪುರಾ ನಿವಾಸಿ ಅಂಜೆಲ್ ಛಕ್ಮಾ(24) ಅವರಿಗೆ ಆರು ಜನರ ಗುಂಪೊಂದು ಡಿಸೆಂಬರ್ 9ರಂದು ಡೆಹ್ರಾಡೂನ್‌ನಲ್ಲಿ ಹಲ್ಲೆ ನಡೆಸಿ, ಮಾರಾಕಾಸ್ತ್ರಗಳಿಂದ ದಾಳಿ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಡಿಸೆಂಬರ್ 26ರಂದು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.