ADVERTISEMENT

ಟಿಆರ್‌ಎಸ್‌ ಶಾಸಕ ನೋಮುಲಾ ನರಸಿಂಹಯ್ಯ ನಿಧನ

ಪಿಟಿಐ
Published 1 ಡಿಸೆಂಬರ್ 2020, 7:40 IST
Last Updated 1 ಡಿಸೆಂಬರ್ 2020, 7:40 IST
ಚಂದ್ರಶೇಖರ್‌ ರಾವ್‌ ಅವರೊಂದಿಗಿರುವ ನೋಮುಲಾ ನರಸಿಂಹಯ್ಯ                                      –ಟ್ವಿಟರ್‌ ಚಿತ್ರ
ಚಂದ್ರಶೇಖರ್‌ ರಾವ್‌ ಅವರೊಂದಿಗಿರುವ ನೋಮುಲಾ ನರಸಿಂಹಯ್ಯ                                      –ಟ್ವಿಟರ್‌ ಚಿತ್ರ   

ಹೈದರಾಬಾದ್‌:ತೆಲಂಗಾಣದ ಟಿಆರ್‌ಎಸ್‌ ಶಾಸಕ ನೋಮುಲಾ ನರಸಿಂಹಯ್ಯ ಅವರು(64) ವಯೋ ಸಂಬಂಧಿ ಕಾಯಿಲೆಯಿಂದಾಗಿ ಮಂಗಳವಾರ ನಿಧನರಾದರು.

ನಲ್ಗೊಂಡ ಜಿಲ್ಲೆಯ ನಾಗಾರ್ಜುನ ಸಾಗರ್ ಕ್ಷೇತ್ರದ ಶಾಸಕ ನರಸಿಂಹಯ್ಯ ಅವರು ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು. ಮಂಗಳವಾರ ಬೆಳಿಗ್ಗೆ 5.30ಕ್ಕೆ ಅವರು ಕೊನೆ ಉಸಿರೆಳೆದರು ಎಂದು ಮೂಲಗಳು ಹೇಳಿವೆ.

ನರಸಿಂಹಯ್ಯ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2014ರಲ್ಲಿ ಟಿಆರ್‌ಎಸ್‌ಗೆ ಸೇರುವ ಮುನ್ನ ಅವರು ಸಿಪಿಐ(ಎಂ) ಪಕ್ಷದಲ್ಲಿದ್ದರು.

ADVERTISEMENT

ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರು,‘ ನರಸಿಂಹಯ್ಯ ತಮ್ಮ ಜೀವನ ಪೂರ್ತಿ ಜನರ ಸೇವೆಗಾಗಿ ದುಡಿದರು. ಅವರ ಸೇವೆಯನ್ನು ಸದಾ ಸ್ಮರಿಸಲಾಗುವುದು’ ಎಂದು ಟ್ವೀಟ್‌ ಮಾಡಿದ್ದಾರೆ.

ನರಸಿಂಹಯ್ಯ ಅವರ ಸಾವು ಟಿಆರ್‌ಸಿ ಮತ್ತು ಅವರ ಕ್ಷೇತ್ರದ ಜನರಿಗೆ ತುಂಬಲಾಗದ ನಷ್ಟ ಎಂದುಕೆ.ಚಂದ್ರಶೇಖರ್‌ ರಾವ್‌ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಕಾಂಗ್ರೆಸ್‌ ಸಂಸದ ಎನ್‌. ಉತ್ತಮ್‌ ಕುಮಾರ್‌ ರೆಡ್ಡಿ, ಸಿಪಿಐ ನಾಯಕ ನಾರಾಯಣ್‌ ಸೇರಿದಂತೆ ಟಿಆರ್‌ಎಸ್‌ ಮತ್ತು ರಾಜ್ಯದ ಹಲವು ಸಚಿವರು ಸಂತಾಪ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.