ADVERTISEMENT

ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆಗೆ ಸಿದ್ಧ: ಅಮೆರಿಕದಿಂದ ಮತ್ತೊಮ್ಮೆ ಪ್ರಸ್ತಾವ 

ಪಿಟಿಐ
Published 22 ಆಗಸ್ಟ್ 2019, 1:46 IST
Last Updated 22 ಆಗಸ್ಟ್ 2019, 1:46 IST
   

ವಾಷಿಂಗ್ಟನ್‌: ಕಾಶ್ಮೀರದ ವಿಚಾರದಲ್ಲಿ ತಾವು ಮಧ್ಯಸ್ಥಿಕೆಗೆ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮಂಗಳವಾರ ಪುನರುಚ್ಚರಿಸಿದ್ದಾರೆ.

'ಮಧ್ಯಸ್ಥಿಕೆಯೊ, ಮತ್ತೊಂದೋ... ಕಾಶ್ಮೀರದ ವಿಚಾರ ಬಗೆಹರಿಸಲು ನನ್ನಿಂದ ಸಾಧ್ಯವಾಗಬಹುದಾದದ್ದನ್ನು ಮಾಡಲು ನಾನು ಸಿದ್ಧ,' ಎಂದು ಟ್ರಂಪ್‌ ಪತ್ರಕರ್ತರಿಗೆ ಹೇಳಿದ್ದಾರೆ. ಅಲ್ಲದೆ, ‘ಹಿಂದೂ ಮತ್ತು ಮುಸ್ಲೀಂ ಎಂಬ ವಿಚಾರಗಳ ನಡುವಿನ ಭಿನ್ನಾಭಿಪ್ರಾಯದ ಫಲವೇ ಕಾಶ್ಮೀರದ ಸಮಸ್ಯೆ,’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

"ಕಾಶ್ಮೀರ ಅತ್ಯಂತ ಸಂಕೀರ್ಣ ಪ್ರದೇಶ. ಅಲ್ಲಿ ಹಿಂದೂಗಳಿದ್ದಾರೆ. ಮುಸ್ಲೀಮರೂ ಇದ್ದಾರೆ. ಅವರಿಬ್ಬರೂ ಸಾಮರಸ್ಯದಿಂದ ಇದ್ದಾರೆ ಎಂದುನಾನು ಹೇಳಲಾರೆ,’ ಎಂದೂ ಅವರೂ ಅನಿಸಿಕೆ ಹೇಳಿದ್ದಾರೆ.

ಈ ವಾರದ ಕೊನೆಯಲ್ಲಿ ಫ್ರಾನ್ಸ್‌ನ ಬೈರೆಟ್ಸ್‌ನಲ್ಲಿ ನಡೆಯುವ ಜಿ–7 ಶೃಂಗ ಸಭೆಯ ನಡುವೆ ಮೋದಿ ಅವರನ್ನು ಭೇಟಿಯಾಗುವುದಾಗಿಯೂ ಅವರು ತಿಳಿಸಿದ್ದಾರೆ.

ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದಾಗುತ್ತಲೇ ಭಾರತ–ಪಾಕ್‌ ನಡುವೆ ಎದುರಾಗಿದ್ದ ದ್ವೇಷಮಯ ವಾತಾವರಣ ನಿವಾರಿಸಲು ಮಧ್ಯಸ್ಥಿಕೆಗೆ ಸಿದ್ಧವಿರುವುದಾಗಿ ಟ್ರಂಪ್‌ ಈ ಹಿಂದೆಯೂ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.