ADVERTISEMENT

ನಿಯಮಗಳ ಬದಲಾವಣೆ ನಡುವೆಯೂ ಸಂವಾದದಲ್ಲಿ ಟ್ರಂಪ್‌ ಭಾಗಿ: ಅಧಿಕಾರಿ ಮಾಹಿತಿ

ಏಜೆನ್ಸೀಸ್
Published 20 ಅಕ್ಟೋಬರ್ 2020, 6:04 IST
Last Updated 20 ಅಕ್ಟೋಬರ್ 2020, 6:04 IST
ಜೋ ಬೈಡನ್‌ ಮತ್ತು ಡೊನಾಲ್ಡ್‌ ಟ್ರಂಪ್‌
ಜೋ ಬೈಡನ್‌ ಮತ್ತು ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳ ನಡುವಿನ ಸಂವಾದ ಕಾರ್ಯಕ್ರಮದ ನಿಯಮದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಹೀಗಿದ್ದರೂ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಗುರುವಾರ ನಡೆಯಲಿರುವ ಅಂತಿಮ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರ್ಧರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಆಯೋಗವು ತನ್ನ ನೆಚ್ಚಿನ ಅಭ್ಯರ್ಥಿಗೆ ನೆರವಾಗಲು ಕೊನೆ ಕ್ಷಣದಲ್ಲಿ ನಿಯಮಗಳನ್ನು ಬದಲಾಯಿಸಿದೆ. ಆದರೂ ಡೊನಾಲ್ಡ್‌ ಟ್ರಂಪ್‌ ಅವರು ಜೋ ಬೈಡನ್‌ ಜೊತೆ ಸಂವಾದ ನಡೆಸಲಿದ್ದಾರೆ’ ಎಂದು ಟ್ರಂಪ್‌ ಪ್ರಚಾರ ವ್ಯವಸ್ಥಾಪಕ ಬಿಲ್ ಸ್ಟೆಪಿಯನ್ ಅವರು ಹೇಳಿದರು.

ಸೋಮವಾರ ಕೆಲ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದ್ದು, ‘ಹೊಸ ನಿಯಮಗಳ ಪ್ರಕಾರ, ಅಭ್ಯರ್ಥಿಗಳಿಗೆ ಆರು ವಿಷಯಗಳನ್ನು ನೀಡಲಾಗುತ್ತದೆ. ಒಬ್ಬ ಅಭ್ಯರ್ಥಿ ಒಂದು ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ಹೇಳುತ್ತಿರುವಾಗ, ಮೊದಲ ಎರಡು ನಿಮಿಷದ ತನಕ ಎದುರಾಳಿ ಹಸ್ತಕ್ಷೇಪ ಮಾಡುವಂತಿಲ್ಲ. 15 ನಿಮಿಷದ ಬಳಿಕ ಈ ನಿಯಮ ಅನ್ವಯವಾಗಲ್ಲ. ಎದುರಾಳಿಗಳು ಮುಕ್ತವಾಗಿ ಚರ್ಚೆ ನಡೆಸಬಹುದು’ ಎಂದು ಆಯೋಗ ಹೇಳಿದೆ.

ADVERTISEMENT

ಮೊದಲ ಅಧ್ಯಕ್ಷೀಯ ಸಂವಾದ ಕಾರ್ಯಕ್ರಮದಲ್ಲಿ ಇಬ್ಬರು ಅಭ್ಯರ್ಥಿಗಳು ಎದುರಾಳಿಯ ಸಂವಾದದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು. ವಿಶೇಷವಾಗಿ ಜೋ ಬೈಡನ್‌ ಅವರ ಸಂವಾದದ ವೇಳೆ ಟ್ರಂಪ್‌ ಅವರು ಹಲವು ಬಾರಿ ಹಸ್ತಕ್ಷೇಪ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.