ADVERTISEMENT

ಅ.11ರಂದು ಟಿಟಿಡಿಯ ಕನ್ನಡ, ಹಿಂದಿ ಚಾನೆಲ್‌ಗೆ ಚಾಲನೆ

ಪಿಟಿಐ
Published 2 ಅಕ್ಟೋಬರ್ 2021, 2:20 IST
Last Updated 2 ಅಕ್ಟೋಬರ್ 2021, 2:20 IST
ತಿರುಪತಿ ದೇವಾಲಯ (ಸಂಗ್ರಹ ಚಿತ್ರ)
ತಿರುಪತಿ ದೇವಾಲಯ (ಸಂಗ್ರಹ ಚಿತ್ರ)   

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಒಡೆತನದ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್‌ನ (ಎಸ್‌ವಿಬಿಸಿ) ಕನ್ನಡ ಹಾಗೂ ಹಿಂದಿ ವಾಹಿನಿಗಳು ಅಕ್ಟೋಬರ್‌ 11ರಂದು ಕಾರ್ಯಾರಂಭ ಮಾಡಲಿವೆ.

ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಅವರು ಅಂದು ಈ ಎರಡು ಚಾನೆಲ್‌ಗಳಿಗೆ ಚಾಲನೆ ನೀಡುವರು. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಟಿಟಿಡಿ ಶುಕ್ರವಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT