ಸಾಂದರ್ಭಿಕ ಚಿತ್ರ
ಮುಂಬೈ: ಕಳೆದ ಕೆಲವು ದಿನಗಳಿಂದ ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಳಸಿ ನದಿ ತುಂಬಿ ಹರಿಯುತ್ತಿದೆ. ಮುಂಬೈ ಜನರಿಗೆ ಕುಡಿಯುವ ನೀರನ್ನು ಪೂರೈಸುವ ಏಳು ನದಿಗಳಲ್ಲಿ ತುಳಸಿ ನದಿಯೂ ಪ್ರಮುಖವಾಗಿದೆ.
ಬೆಳಿಗ್ಗೆ ಸುಮಾರು 8.30ರಿಂದ ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನವನದ ಒಳಾಂಗಣದಲ್ಲಿಯೂ ನೀರಿನ ಹರಿವು ಪ್ರಾರಂಭವಾಗಿದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ತಿಳಿಸಿದೆ.
ಶೇ 10ರಷ್ಟು ನೀರಿನ ವ್ಯತ್ಯಯವನ್ನು ಅನುಭವಿಸುತ್ತಿದ್ದ ಮುಂಬೈ ವಾಸಿಗರಿಗೆ ಈಗ ತುಳಸಿ ಸರೋವರ ತಂಬಿರುವುದು ಸಂತಸದ ಸಂಗತಿಯಾಗಿದೆ. ಭಾರಿ ಪ್ರಮಾಣದ ಮಳೆಯಿಂದಾಗಿ ಜಲಾನಯನ ತುಂಬಿದೆ ಎಂದು ಬಿಎಂಸಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.