ADVERTISEMENT

ಇಸ್ರೇಲ್ ಪರವಾಗಿ ಬೇಹುಗಾರಿಕೆ ಆರೋಪ: ಟರ್ಕಿಯಲ್ಲಿ 33 ಜನರ ಬಂಧನ

ಪಿಟಿಐ
Published 3 ಜನವರಿ 2024, 6:07 IST
Last Updated 3 ಜನವರಿ 2024, 6:07 IST
   

ಇಸ್ತಾಂಬುಲ್(ಟರ್ಕಿ): ಇಸ್ರೇಲ್‌ನ ವಿದೇಶಿ ಗುಪ್ತಚರ ಸೇವೆ ಮೊಸಾದ್ ಪರವಾಗಿ ಬೇಹುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಶಂಕೆಯ ಮೇಲೆ ಟರ್ಕಿ ಅಧಿಕಾರಿಗಳು 33 ಜನರನ್ನು ಬಂಧಿಸಿದ್ದಾರೆ ಎಂದು ಅನಾಡೋಲು ಸುದ್ದಿ ಸಂಸ್ಥೆ ಭದ್ರತಾ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಈ ಬಗ್ಗೆ ಇಸ್ತಾಂಬುಲ್ ಪ್ರಾಸಿಕ್ಯೂಟರ್ ಕಚೇರಿಯ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ತನಿಖಾ ಬ್ಯೂರೊ ತನಿಖೆ ನಡೆಸುತ್ತಿದೆ.

ಬಂಧಿತ ಶಂಕಿತರು ಮೊಸಾದ್ ಪರವಾಗಿ ಕಣ್ಗಾವಲು, ಹಲ್ಲೆ ಮತ್ತು ಅಪಹರಣದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ADVERTISEMENT

ಎಂಟು ಪ್ರಾಂತ್ಯಗಳಲ್ಲಿನ 57 ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆದ ದಾಳಿಗಳಲ್ಲಿ ಶಂಕಿತರನ್ನು ಸೆರೆಹಿಡಿಯಲಾಗಿದೆ. ಉಳಿದ 13 ಶಂಕಿತರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿವೆ.

ಬಂಧಿತರ ಬಗ್ಗೆ ಟರ್ಕಿ ಹೆಚ್ಚಿನ ಮಾಹಿತಿ ಬಿಟ್ಟು ಕೊಟ್ಟಿಲ್ಲ.

ಲೆಬನಾನ್, ಟರ್ಕಿ ಮತ್ತು ಕತಾರ್ ಸೇರಿದಂತೆ ಎಲ್ಲ ಕಡೆಗಳಲ್ಲಿ ಹಮಾಸ್ ಉಗ್ರರನ್ನು ಸದೆಬಡಿಯಲುಸಿದ್ಧವಾಗಿದ್ದೇವೆ ಎಂದು ಇಸ್ರೇಲ್‌ನ ದೇಶೀಯ ಭದ್ರತಾ ಸಂಸ್ಥೆಯ ಮುಖ್ಯಸ್ಥ ಶಿನ್ ಬೆಟ್ ಹೇಳಿಕೆ ನೀಡಿದ ವಾರಗಳ ನಂತರ ಈ ಬಂಧನದ ವರದಿ ಬಂದಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.