
ಚೆನ್ನೈ: ಕೆಲ ಷರತ್ತುಗಳೊಂದಿಗೆ ಸೇಲಂನಲ್ಲಿ ಸಭೆ ನಡೆಸಲು ಟಿವಿಕೆ ಪಕ್ಷದ ಮುಖಂಡ ವಿಜಯ್ ಅವರಿಗೆ ಪೊಲೀಸರು ಅನುಮತಿಸಿದ್ದಾರೆ.
ನಾಳೆ ಸೇಲಂನ ಸೀಲನಾಯಕನಪಟ್ಟಿಯ ಕೆವಿಪಿ ಗಾರ್ಡನ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ಕ್ಯೂಆರ್ ಕೋಡ್ ಪಾಸ್ ಹೊಂದಿರುವ 4,998 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಜತೆಗೆ ಸ್ಥಳದಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರಿಗೆ ಸಭೆಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ.
ಸಭೆಗೆ ಅನುಮತಿಸಿರುವುದನ್ನು ಖಚಿತಪಡಿಸಿರುವ ಟಿವಿಕೆ ಪಕ್ಷ, ಪೊಲೀಸ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ತನ್ನ ಸದಸ್ಯರಿಗೆ ಮನವಿ ಮಾಡಿದೆ.
2025ರ ಡಿಸೆಂಬರ್‌ನಲ್ಲಿ ಪುದುಚೇರಿಯಲ್ಲಿ ನಡೆದ ಸಭೆಯಲ್ಲಿಯೂ ಇಂತಹದ್ದೆ ಷರತ್ತುಗಳನ್ನು ಪೊಲೀಸರು ಹಾಕಿದ್ದರು. ಆ ಸಭೆಗೆ ಕ್ಯೂಆರ್ ಕೋಡ್ ಪಾಸ್ ಹೊಂದಿದ್ದ 5 ಸಾವಿರ ಜನರಿಗೆ ಅವಕಾಶ ನೀಡಲಾಗಿತ್ತು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕರೂರಿನಲ್ಲಿ ನಡೆದ ಟಿವಿಕೆ ಸಾರ್ವಜನಿಕ ಸಭೆಯಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 41 ಜನರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.