ADVERTISEMENT

ಜೇನು ದಾಳಿ: ಉತ್ತರ ಪ್ರದೇಶದಲ್ಲಿ ಸಹೋದರರು ಸಾವು

ಪಿಟಿಐ
Published 20 ಸೆಪ್ಟೆಂಬರ್ 2023, 7:55 IST
Last Updated 20 ಸೆಪ್ಟೆಂಬರ್ 2023, 7:55 IST
<div class="paragraphs"><p>ಜೇನು (ಸಾಂದರ್ಭಿಕ ಚಿತ್ರ)</p></div>

ಜೇನು (ಸಾಂದರ್ಭಿಕ ಚಿತ್ರ)

   

ಗೊಂಡಾ( ಉತ್ತರ ಪ್ರದೇಶ) ಜೇನು ಹುಳು ದಾಳಿಯಿಂದಾಗಿ ಸಹೋದರರಿಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಮಂಕಾಪುರ ಎಂಬಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಯೂಗ್(4) ಮತ್ತು ಯೋಗೇಶ್‌( 6) ಎಂದು ಗುರುತಿಸಲಾಗಿದೆ. ಸಹೋದರರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ ಎಂದು ಹೇಳಿದ್ದಾರೆ.

ADVERTISEMENT

ಜೇನು ಹುಳಗಳ ದಾಳಿಯಲ್ಲಿ ಮೃತರ ಅಜ್ಜಿ ಉತ್ತಮ್ಮ ಕೂಡ ಗಾಯಗೊಂಡಿದ್ದರು. ಸಂತ್ರಸ್ತೆಯನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸ್ ಅಧಿಕಾರಿ ಸುಧೀರ್ ಕುಮಾರ್‌ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.