ADVERTISEMENT

ಸದ್ಯದಲ್ಲೇ ಮಕ್ಕಳಿಗೆ ಕೋವಿಡ್‌ ಲಸಿಕೆ ಲಭ್ಯ

ವರದಿ ಪರಿಶೀಲಿಸುತ್ತಿರುವ ಭಾರತೀಯ ಔಷಧ ನಿಯಂತ್ರಕರು

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 17:20 IST
Last Updated 24 ಜುಲೈ 2021, 17:20 IST
   

ನವದೆಹಲಿ: ಮಕ್ಕಳಿಗಾಗಿ, ದೇಶೀಯ ವಾಗಿ ಅಭಿವೃದ್ಧಿಪಡಿಸಲಾಗಿರುವ ಕೋವಿಡ್‌–19ನ ಎರಡು ಲಸಿಕೆಗಳು ಶೀಘ್ರದಲ್ಲೇ ಲಸಿಕಾ ಅಭಿಯಾನಕ್ಕೆ ಲಭ್ಯವಾಗಲಿವೆ.

12ರಿಂದ 18 ವರ್ಷ ವಯೋ ಮಾನದ 13ರಿಂದ 14 ಕೋಟಿ ಹದಿವಯಸ್ಸಿನವರಿಗೆ ಲಸಿಕೆ ನೀಡಬೇಕಿದೆ. ದೇಶದಾದ್ಯಂತ ವರದಿಯಾಗಿರುವ ಒಟ್ಟು 3 ಕೋಟಿ ಕೋವಿಡ್‌–19 ಪ್ರಕರಣಗಳಲ್ಲಿ, 20 ವರ್ಷಕ್ಕಿಂತ ಕಡಿಮೆ ವಯೋಮಾನದವರುಶೇ.11 ರಷ್ಟಿದ್ದಾರೆ. 12 ರಿಂದ 18 ವರ್ಷ ವಯೋಮಾನದ ವರಿಗೆ ನೀಡಬೇಕಿರುವ ಲಸಿಕೆಗಳ ಪ್ರಾಯೋಗಿಕ ಪರೀಕ್ಷೆ ನಡೆಸಿರುವ ಔಷಧ ಸಂಸ್ಥೆ ಝೈಡಸ್‌ ಕಾಡಿಲ ನೀಡಿರುವ ವರದಿಯನ್ನು ಭಾರತೀಯ ಔಷಧ ನಿಯಂತ್ರಕ ಪರಿಶೀಲನೆ ನಡೆಸುತ್ತಿದೆ. ಭಾರತ್‌ ಬಯೋಟೆಕ್‌ ಸಂಸ್ಥೆ ಕೂಡಾ 2ರಿಂದ 8 ವಯೋಮಾನದ ವರಿಗೆ ನೀಡಬೇಕಿರುವ ಲಸಿಕೆಯ ಪ್ರಯೋಗ ನಡೆ ಸುತ್ತಿದೆ.

‘ದೇಶದಾದ್ಯಂತ ಕೊರೊನಾ ಲಸಿಕೆಗಳ ಅನುಮೋದನೆ ಮತ್ತು ಲಭ್ಯತೆಯು ಈ ಪ್ರಾಯೋಗಿಕ ಪರೀಕ್ಷೆಗಳ ದತ್ತಾಂಶಗಳನ್ನು ಅವಲಂಬಿಸಿದೆ’ ಎಂದು ಕೇಂದ್ರ ಆರೋಗ್ಯ ಸಹಾಯಕ ಸಚಿವ ಭಾರತಿ ಪವಾರ್‌ ಲೋಕಸಭೆಗೆ ತಿಳಿಸಿದ್ದಾರೆ.

ADVERTISEMENT

ಯುರೋಪ್‌ ಔಷಧ ನಿಯಂತ್ರಣ ಮೊಡೆರ್ನಾ ಲಸಿಕೆಯನ್ನು 12–17ರ ವಯೋಮಾನದ ಮಕ್ಕಳಿಗೆ ನೀಡಲು ಅನುಮೋದನೆ ನೀಡಿದೆ. ಫೈಜರ್‌–ಬಯೋಎನ್‌ಟೆಕ್‌ ಲಸಿಕೆಯನ್ನು 12–15ರ ವಯೋಮಾನದ ಮಕ್ಕಳಿಗೆ ನೀಡಲು ಅಮೆರಿಕ ಅನುಮೋದನೆ ನೀಡಿದೆ. ಲಸಿಕೆಪೂರೈಕೆಗೆ ಸಂಬಂಧಿ ಸಿದಂತೆ ಭಾರತ ಎರಡೂ ಸಂಸ್ಥೆಗಳ ಜೊತೆ ಮಾತುಕತೆ ನಡೆಸುತ್ತಿದೆ. ಆದರೆ ಈ ಸಂಸ್ಥೆಗಳು ಹಲವು ದೇಶಗಳ ಲಸಿಕೆ ಬೇಡಿಕೆ ಪೂರೈಸುತ್ತಿರುವ ಕಾರಣ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.