
ಪಿಟಿಐ
ಗ್ಯಾಂಗ್ಟಕ್ (ಪಿಟಿಐ): ಸಿಕ್ಕಿಂನಲ್ಲಿ ಗುರುವಾರ 4.6 ಮತ್ತು 3.5 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿವೆ.
ಬೆಳಿಗ್ಗೆ 11.24ರ ಸುಮಾರಿಗೆ 4.6 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ್ದು, ಗ್ಯಾಲ್ಶಿಂಗ್ ಜಿಲ್ಲೆಯ ಯೂಕ್‌ಸೋಮ್‌ನಿಂದ ಈಶಾನ್ಯಕ್ಕೆ 4 ಕಿ.ಮೀ ಕಂಪನ ಕೇಂದ್ರಸ್ಥಾನವಾಗಿತ್ತು. ಭೂಮಿಯ 10 ಕಿ.ಮೀ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಅಧ್ಯಯನ ಸಂಸ್ಥೆ ತಿಳಿಸಿದೆ.
ಮಂಗನ್ ಜಿಲ್ಲೆಯಲ್ಲಿ ಮಧ್ಯಾಹ್ನ 12.17ರ ಸುಮಾರಿಗೆ 3.5 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ್ದು, ಗ್ಯಾಂಗ್ಟಕ್‌ನಿಂದ ವಾಯವ್ಯಕ್ಕೆ 11 ಕಿ.ಮೀ ಕಂಪನ ಕೇಂದ್ರಸ್ಥಾನವಾಗಿತ್ತು. ಭೂಮಿಯ 10 ಕಿ.ಮೀ ಆಳದಲ್ಲಿ ಕಂಪನ ಸಂಭವಿಸಿದೆ.
ಈ ಎರಡೂ ಭೂಕಂಪನದಿಂದ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.