ADVERTISEMENT

ಶಿವಾಜಿ ಪಾರ್ಕ್‌ನಲ್ಲಿ ದಸರಾ ರ್‍ಯಾಲಿ: ಉದ್ಧವ್‌ ಠಾಕ್ರೆ 

ಪಿಟಿಐ
Published 29 ಆಗಸ್ಟ್ 2022, 12:50 IST
Last Updated 29 ಆಗಸ್ಟ್ 2022, 12:50 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ   

ಮುಂಬೈ:ಇಲ್ಲಿನ ಶಿವಾಜಿ ಪಾರ್ಕ್‌ನಲ್ಲಿ ಶಿವಸೇನಾದ ವಾರ್ಷಿಕ ದಸರಾ ರ‍್ಯಾಲಿ ಅಕ್ಟೋಬರ್‌ 5ರಂದು ನಡೆಯಲಿದೆ ಎಂದು ಸೇನಾ ಅಧ್ಯಕ್ಷ ಉದ್ಧವ್‌ ಠಾಕ್ರೆ ಸೋಮವಾರ ತಿಳಿಸಿದರು.

ಠಾಕ್ರೆ ಬಣವು ಮುಂಬೈ ಮಹಾನಗರ ಪಾಲಿಕೆಯಿಂದ ರ‍್ಯಾಲಿಗೆ ಇನ್ನೂ ಅನುಮತಿ ಪಡೆದಿಲ್ಲ ಎಂಬ ಮಾಹಿತಿ ಬೆನ್ನಲ್ಲೇ ಉದ್ಧವ್‌ ಠಾಕ್ರೆಯವರಿಂದ ಈ ಹೇಳಿಕೆ ಹೊರಬಿದ್ದಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಉದ್ಧವ್‌ ಅವರು,ರಾಜ್ಯದ ವಿವಿಧ ಭಾಗಗಳಿಂದ ಶಿವಾಜಿ ಪಾರ್ಕ್‌ಗೆ ಸೇನಾ ಕಾರ್ಯಕರ್ತರನ್ನು ಕರೆತರಲು ಶಿವಸೇನಾ ಸಿದ್ಧತೆ ಆರಂಭಿಸಿದೆ ಎಂದರು.

ADVERTISEMENT

ವಾರ್ಷಿಕ ದಸರಾ ರ‍್ಯಾಲಿ ನಡೆಸಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸ್ಥಳೀಯಾಡಳಿತ ಸ್ವೀಕರಿಸಿಲ್ಲ. ಅನುಮತಿ ತಡೆಹಿಡಿದಿದೆ ಎಂದುಉದ್ಧವ್‌ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಶನಿವಾರ ಹೇಳಿದ್ದರು.

ಇದೇ ವರ್ಷದ ಜೂನ್‌ನಲ್ಲಿಶಿವಸೇನಾ ವಿಭಜನೆಯಾದ ನಂತರ ನಡೆಯುತ್ತಿರುವ ಮೊದಲ ದಸರಾ ರ‍್ಯಾಲಿ ಇದು. ಸೇನಾದಶಾಸಕರ ಒಂದು ಗುಂಪಿನ ಬಂಡಾಯದಿಂದಾಗಿ ಠಾಕ್ರೆ ನೇತೃತ್ವದ ಸರ್ಕಾರ ಪತನಗೊಂಡಿತ್ತು.

ಶಿವಾಜಿ ಉದ್ಯಾನದಲ್ಲಿ ದಶಕಗಳ ಹಿಂದೆಸೇನಾ ಇಂತಹ ರಾಜಕೀಯ ಸಮಾವೇಶವನ್ನು ದಸರಾ ವೇಳೆ ನಡೆಸಿತ್ತು. ಸೇನಾದ ಸಂಸ್ಥಾಪಕ ಬಾಳ ಸಾಹೇಬ್‌ ಠಾಕ್ರೆ ಅವರ ಹರಿತ ಭಾಷಣಕ್ಕೆ ಸಮಾವೇಶ ಸಾಕ್ಷಿಯಾಗಿತ್ತು. ಈಗ ಅಂತಹದೇ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಠಾಕ್ರೆ ನೇತೃತ್ವದ ಸರ್ಕಾರ ಪತನಗೊಂಡ ನಂತರ ಬಿಜೆಪಿ ಜತೆಗೆ ಶಿವ ಸೇನಾ ಬಂಡಾಯ ನಾಯಕ ಏಕಾಂತ್‌ ಸಿಂಧೆ ಸರ್ಕಾರ ರಚಿಸಿದ್ದಾರೆ. ಸದ್ಯ ಸ್ಥಳೀಯಾಡಳಿತವನ್ನು ಆಡಳಿತಾಧಿಕಾರಿ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.