ADVERTISEMENT

ಉತ್ತರಾಖಂಡ ನೀರ್ಗಲ್ಲು ಕುಸಿತ: ತಪೋವನದಲ್ಲಿ ಮತ್ತೆರಡು ಶವಗಳು ಪತ್ತೆ

ಪಿಟಿಐ
Published 21 ಫೆಬ್ರುವರಿ 2021, 5:32 IST
Last Updated 21 ಫೆಬ್ರುವರಿ 2021, 5:32 IST
ಉತ್ತರಖಾಂಡದ ಚಮೋಲಿಯಲ್ಲಿ ನೀರ್ಗಲ್ಲು ಕುಸಿತ ಅವಘಡದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಸಿಬ್ಬಂದಿ                                  –ಪಿಟಿಐ ಚಿತ್ರ
ಉತ್ತರಖಾಂಡದ ಚಮೋಲಿಯಲ್ಲಿ ನೀರ್ಗಲ್ಲು ಕುಸಿತ ಅವಘಡದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಸಿಬ್ಬಂದಿ                                  –ಪಿಟಿಐ ಚಿತ್ರ   

ಗೋಪೇಶ್ವರ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತ ಅವಘಡ ಸಂಬಂಧಿಸಿದಂತೆ ರಕ್ಷಣಾ ಕಾರ್ಯ 15 ನೇ ದಿನವೂ ಮುಂದುವರಿದಿದ್ದು, ಶನಿವಾರ ತಪೋವನ–ವಿಷ್ಣುಗಡ್ ಯೋಜನೆಯ ಸ್ಥಳದಲ್ಲಿ ಎರಡು ಶವಗಳನ್ನು ಹೊರತೆಗೆಯಲಾಗಿದೆ.

‘ಶನಿವಾರ ಸಂಜೆ ಮೂರು ಶವಗಳು ಪತ್ತೆಯಾಗಿತ್ತು. ರಾತ್ರಿ ವೇಳೆಗೆ ಇನ್ನೂ ಎರಡು ಶವಗಳು ಸಿಕ್ಕಿವೆ. ಈ ಮೂಲಕ ಮೃತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. 137 ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಫೆಬ್ರುವರಿ 7 ರಂದು ಚಮೋಲಿ ಜಿಲ್ಲೆಯ ರಿಷಿ ಗಂಗಾದ ಬಳಿ ನೀರ್ಗಲ್ಲು ಕುಸಿತ ಸಂಭವಿಸಿದೆ. ಇದರಿಂದಾಗಿ ಸಂಭವಿಸಿದ ಪ್ರವಾಹದಲ್ಲಿ 13.2 ಮೆಗಾವಾಟ್ ಸಾಮರ್ಥ್ಯದ ರಿಷಿ ಗಂಗಾ ಜಲವಿದ್ಯುತ್ ಯೋಜನೆಯು ಸಂಪೂರ್ಣ ನಾಶಗೊಂಡಿದೆ. ತಪೋವನ–ವಿಷ್ಣುಗಡ್ ಯೋಜನೆಗೂ ಭಾರಿ ಹಾನಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.