ನವದೆಹಲಿ:ವಿದ್ಯಾರ್ಥಿಗಳು ಸೇರಿದಂತೆ ದೇಶದ 182 ನಾಗರಿಕರನ್ನು ಉಕ್ರೇನ್‌ನಿಂದ ಕರೆತಂದಿರುವ ವಿಶೇಷ ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಬಂದಿಳಿದಿದೆ.
'ವಿದ್ಯಾರ್ಥಿಗಳೂ ಸೇರಿದಂತೆ 182 ನಾಗರಿಕರನ್ನು ಹೊತ್ತು ಉಕ್ರೇನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಉಕ್ರೇನ್‌ನ ವಿಶೇಷ ವಿಮಾನವು ದೆಹಲಿ ವಿಮಾನ ನಿಲ್ದಾಣಕ್ಕೆ ಇಂದು (ಗುರುವಾರ) ಬೆಳಿಗ್ಗೆ 7.45ಕ್ಕೆ ಬಂದಿಳಿದಿದೆ' ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾದ ಸಂಭವನೀಯ ಆಕ್ರಮಣವನ್ನು ಗಮನದಲ್ಲಿರಿಸಿ,ದೇಶದ ನಾಗರಿಕರನ್ನು ಸುರಕ್ಷಿತವಾಗಿ ಕರೆತರುವ ಸಲುವಾಗಿ ಭಾರತಮೂರು ವಿಶೇಷ ವಿಮಾನಗಳನ್ನು ನಿಯೋಜಿಸಿತ್ತು.
ನಾಗರಿಕರನ್ನು ವಾಪಸ್ ಕರೆತರುವಕಾರ್ಯಾಚರಣೆಯ ಭಾಗವಾಗಿ, ಮಂಗಳವಾರ 242 ಜನರು ಭಾರತಕ್ಕೆ ವಾಪಸ್ ಆಗಿದ್ದರು.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ನಲ್ಲಿಇಂದು (ಗುರುವಾರ, ಫೆ.24) 'ಮಿಲಿಟರಿ ಕಾರ್ಯಾಚರಣೆ'ಯನ್ನು ಘೋಷಿಸಿದ್ದಾರೆ. ಅದರಂತೆ ರಷ್ಯಾ ಸೇನೆ ಕಾರ್ಯಾಚರಣೆ ಆರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.