ADVERTISEMENT

ಮದ್ಯದಂಗಡಿ ಮುಂದೆ ಬೀಡಾಡಿ ದನಗಳನ್ನು ಕಟ್ಟಿ ಉಮಾ ಭಾರತಿ ಪ್ರತಿಭಟನೆ

ಕಳೆದ ವರ್ಷ  ಮದ್ಯದಂಗಡಿ ಮೇಲೆ ಸಗಣಿ, ಕಲ್ಲೆಸೆದಿದ್ದ ಉಮಾ ಭಾರತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2023, 3:00 IST
Last Updated 3 ಫೆಬ್ರುವರಿ 2023, 3:00 IST
   

ಒರ್ಚಾ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಮದ್ಯಪಾನ ವಿರುದ್ಧ ಹೋರಾಟ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು, ಮದ್ಯದಂಗಡಿ ಮುಂದೆ ಬೀಡಾಡಿ ದನಗಳನ್ನು ಕಟ್ಟಿ ಪ್ರತಿಭಟನೆ ನಡೆಸಿದ್ದಾರೆ.

ದನಗಳಿಗೆ ಹುಲ್ಲು ತಿನ್ನಿಸಿ, ಮದ್ಯಪಾನ ಬದಲು ಹಾಲು ಕುಡಿಯಿರಿ ಎಂದು ಹೇಳಿದ್ದಾರೆ.

ನಿವಾರಿ ಜಿಲ್ಲೆಯಲ್ಲಿರುವ ಇಂಡಿಯನ್‌ ಮೇಡ್‌ ಫಾರಿನ್‌ ಲಿಕ್ಕರ್‌ (ಐಎಂಎಫ್‌ಎಲ್‌) ಮಳಿಗೆ ಮುಂದೆ ಬೀಡಾಡಿ ದನಗಳನ್ನು ಕಟ್ಟಿ, ‘ಹಾಲು ಕುಡಿಯಿರಿ, ಶರಾಬನ್ನಲ್ಲ‘ ಎಂದು ಘೋಷಣೆ ಕೂಗಿದ್ದಾರೆ. ತಕ್ಷಣವೇ ಮಳಿಗೆಯ ಮಾರಾಟ ಸಿಬ್ಬಂದಿ ಬಾಗಿಲು ಬಂದ್ ಮಾಡಿದ್ದಾರೆ.

ADVERTISEMENT

ರಾಜ್ಯದಲ್ಲಿ ಮದ್ಯವಿರೋಧಿ ಅಭಿಯಾನ ನಡೆಸುತ್ತಿರುವ ಅವರು, 2022ರ ಜೂನ್‌ ತಿಂಗಳಿನಲ್ಲಿ ಮದ್ಯದ ಅಂಗಡಿಯೊಂದಕ್ಕೆ ಸಗಣಿ ಎಸೆದಿದ್ದರು. ಅದಕ್ಕೂ ಮುನ್ನ ಭೋಪಾಲ್‌ನಲ್ಲಿ ಮದ್ಯದ ಅಂಗಡಿಗೆ ಕಲ್ಲೆಸೆದಿದ್ದರು.

‘ಮದ್ಯಪಾನ ಮಾಡುವ ಅಭ್ಯಾಸವನ್ನು ಸರ್ಕಾರ ಪ್ರೋತ್ಸಾಹಿಸಬಾರದು‘ ಎಂದು ಹೇಳಿರುವ ಅವರು, ಮದ್ಯಪಾನದಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ನಾವು ತಡೆಗಟ್ಟುತ್ತೇವೆ ಎಂದು ನಾವು 2003ರ ಚುನಾವಣೆಯಲ್ಲಿ ಮತ ಕೇಳಿದ್ದೆವು. ಈಗಿನ ಸಮಸ್ಯೆಗೆ ನಾನೂ ಕೂಡ ಕಾರಣ ಎಂದು ಅವರು ಹೇಳಿದರು.

2003-2004ರಲ್ಲಿ ಉಮಾ ಭಾರತಿ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.