ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆಗಿರುವ ಬೆಂಬಲ ಪರಿಶೀಲಿಸಲು ವಿಶ್ವಸಂಸ್ಥೆ ಸಮಿತಿ ರಚಿಸಲಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 14:23 IST
Last Updated 19 ಡಿಸೆಂಬರ್ 2019, 14:23 IST
   

ಕೋಲ್ಕತ್ತಾ: ವಿಶ್ವಸಂಸ್ಥೆ ಅಥವಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಮಿತಿಪೌರತ್ವ ತಿದ್ದುಪಡಿ ಕಾಯ್ದೆಗೆ ಭಾರತದಲ್ಲಿರುವ ಬೆಂಬಲ ಮತ್ತು ವಿರೋಧವನ್ನು ಪರಾಮರ್ಶೆ ಮಾಡಲಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಒತ್ತಾಯಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನೋಂದಣಿ ಪ್ರಕ್ರಿಯೆ (ಎನ್‌ಆರ್‌ಸಿ) ವಿರುದ್ಧ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಮಮತಾ ಬ್ಯಾನರ್ಜಿ ಇಂದು ಈ ಪ್ರಸ್ತಾವವನ್ನು ದೇಶದ ಮುಂದಿಟ್ಟಿದ್ದಾರೆ.

ಕೋಲ್ಕತ್ತಾದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿರುವ ಅವರು, ‘ದೇಶಕ್ಕೆ ಸ್ವಾತಂತ್ರ ಬಂದು 73 ವರ್ಷಗಳೇ ಆಗಿವೆ. ಆದರೆ, ಈಗ ದಿಢೀರನೇ ನಾವೆಲ್ಲರೂ ನಮ್ಮ ಪೌರತ್ವ ಸಾಬೀತು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಈ ಹಿಂದೆ ಬಿಜೆಪಿಯ ತಲೆ ಮತ್ತು ಬಾಲ ಎಲ್ಲಿತ್ತು? ಬಿಜೆಪಿ ರಾಷ್ಟ್ರವನ್ನು ವಿಭಜಿಸುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವ ವರೆಗೆ ನಾವು ಪ್ರತಿಭಟನೆ ನಿಲ್ಲಿಸುವುದು ಬೇಡ,’ ಎಂದು ಮಮತಾ ಹೋರಾಟಗಾರರಿಗೆ ತಿಳಿಸಿದರು.

ADVERTISEMENT

ನಂತರ ಮಾತನಾಡಿದ ಅವರು, ‘ವಿಶ್ವಸಂಸ್ಥೆ ಮತ್ತುಮಾನವ ಹಕ್ಕುಗಳ ಆಯೋಗದಂಥ ನಿರ್ಲಿಪ್ತ ಸಂಸ್ಥೆಗಳ ಸಮಿತಿಪೌರತ್ವ ಕಾಯ್ದೆಗೆ ಭಾರತದಲ್ಲಿರುವ ಬೆಂಬಲ ಮತ್ತುವಿರೋಧಗಳ ಕುರಿತು ಪರಿಶೀಲನೆ ನಡೆಸಲಿ. ಆಗ ಕಾಯ್ದೆ ವಿರುದ್ಧ ಎಷ್ಟು ಮಂದಿ ಇದ್ದಾರೆ, ಇದರ ಪರವಾಗಿ ಎಷ್ಟು ಮಂದಿ ಇದ್ದಾರೆ ಎಂಬುದು ಗೊತ್ತಾಗಲಿದೆ,’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.