ADVERTISEMENT

ಮುಂಬೈ ದಾಳಿ ಸಂತ್ರಸ್ತ್ರರಿಗೆ ಗೌರವ ಸಲ್ಲಿಸುವ ಮೂಲಕ ಗುಟೆರೆಸ್‌ ಪ್ರವಾಸ ಆರಂಭ

ಪಿಟಿಐ
Published 18 ಅಕ್ಟೋಬರ್ 2022, 13:54 IST
Last Updated 18 ಅಕ್ಟೋಬರ್ 2022, 13:54 IST
ಆ್ಯಂಟೊನಿಯೊ ಗುಟೆರಸ್‌
ಆ್ಯಂಟೊನಿಯೊ ಗುಟೆರಸ್‌   

ಮುಂಬೈ: ಮೂರು ದಿನಗಳ ಪ್ರವಾಸಕ್ಕಾಗಿ ಮಂಗಳವಾರ ಭಾರತಕ್ಕೆ ಆಗಮಿಸಲಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್‌ ಅವರು ತಮ್ಮ ಪ್ರವಾಸವನ್ನು 2008ರಲ್ಲಿ ಮುಂಬೈನ ತಾಜ್‌ ಮಹಲ್‌ ಪ್ಯಾಲೆಸ್‌ ಹೋಟೆಲ್‌ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸಂತ್ರಸ್ತ್ರರಿಗೆ ಗೌರವ ಸಲ್ಲಿಸುವ ಮೂಲಕ ಆರಂಭಿಸಲಿದ್ದಾರೆ.

ಅದೇ ದಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ (ಐಐಟಿ) ‘ಇಂಡಿಯಾ@77: ವಿಶ್ವಸಂಸ್ಥೆ ಭಾರತ ಸಹಭಾಗಿತ್ವ: ದಕ್ಷಿಣ–ದಕ್ಷಿಣ ಸಹಕಾರ ಸದೃಢಗೊಳಿಸುವಿಕೆ’ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.

ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಗುಟೆರೆಸ್‌ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜಾಗತಿಕ ವಿದ್ಯಮಾನಕ್ಕೆ ಸಂಬಂಧಿಸಿದ ವಿಷಯಗಳು, ವಿಶ್ವಸಂಸ್ಥೆ ಜೊತೆ ಭಾರತದ ಸಂಬಂಧವನ್ನು ಗಟ್ಟಿಗೊಳಿಸುವುದು ಮತ್ತು ಮುಂಬರಲಿರುವ ಜಿ20 ಶೃಂಗದ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಳ್ಳುವ ಕುರಿತು ಅವರು ಚರ್ಚೆ ನಡೆಸುವರು ಎಂದು ಹೇಳಲಾಗಿದೆ.

ADVERTISEMENT

ಗುಜರಾತ್‌ನ ಕೆವಡಿಯಾದಲ್ಲಿ ಗುರುವಾರ ನಡೆಯಲಿರುವ ಲೈಫ್‌ (ಲೈಫ್‌ಸ್ಟೈಲ್‌ ಫಾರ್‌ ಎನ್ವಿರಾನ್‌ಮೆಂಟ್‌) ಕಾರ್ಯಕ್ರಮದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಗುಟೆರೆಸ್‌ ಪಾಲ್ಗೊಳ್ಳಲಿದ್ದಾರೆ.

ಅವರು ಏಕತಾ ಪ್ರತಿಮೆಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸುವ ನಿರೀಕ್ಷೆ ಇದೆ. ದೇಶದ ಮೊದಲ ಸೌರಶಕ್ತಿ ಚಾಲಿತ ಗ್ರಾಮ ಮೊಧೇರಾಗೂ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.