ADVERTISEMENT

ಆನ್‌ಲೈನ್ ತರಗತಿ: ಸ್ಮಾರ್ಟ್‌ಫೋನ್ ಖರೀದಿಸಲಾಗದೇ ಬಾಲಕಿ ಆತ್ಮಹತ್ಯೆ

ಮಹಾರಾಷ್ಟ್ರದಲ್ಲಿ ನಡೆದ ಘಟನೆ

ಪಿಟಿಐ
Published 21 ಜೂನ್ 2021, 12:36 IST
Last Updated 21 ಜೂನ್ 2021, 12:36 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಔರಂಗಾಬಾದ್: ಆನ್‌ಲೈನ್‌ ತರಗತಿಗೆ ಹಾಜರಾಗಲು ಮೊಬೈಲ್ ಫೋನ್ ಖರೀದಿಸಲು ಸಾಧ್ಯವಾಗದ ಕಾರಣ 17 ವರ್ಷದ ಬಾಲಕಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರುಸೋಮವಾರ ತಿಳಿಸಿದ್ದಾರೆ.

‘ನಾಂದೇಡ್‌ ಜಿಲ್ಲೆಯ ನಯಗಾಂವ್‌ನಲ್ಲಿರುವ ತನ್ನ ಮನೆಯಲ್ಲಿ ಜೂನ್ 16ರಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಲಕಿಯು 11ನೇ ತರಗತಿ ಓದುತ್ತಿದ್ದಳು. ಆಕೆಯ ತಂದೆ–ತಾಯಿ ದಿನಗೂಲಿ ನೌಕರರಾಗಿದ್ದಾರೆ. ಆನ್‌ಲೈನ್ ತರಗತಿ ಹಾಜರಾಗಲು ಮೊಬೈಲ್ ಬೇಕೆಂದು ಬಾಲಕಿ ಒತ್ತಾಯಿಸಿದ್ದಳು. ಆದರೆ, ಸ್ಮಾರ್ಟ್ ಫೋನ್ ಖರೀದಿಸುವಷ್ಟು ಹಣ ಪೋಷಕರ ಬಳಿ ಇರಲಿಲ್ಲ.

ADVERTISEMENT

‘ಇದರಿಂದ ಬೇಸರಗೊಂಡಿದ್ದ ಬಾಲಕಿ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಾಳೆ. ಘಟನಾ ಸ್ಥಳದಲ್ಲಿ ಆತ್ಮಹತ್ಯಾ ಪತ್ರ ದೊರೆತಿದ್ದು, ಬಾಲಕಿಯ ಸಾವಿಗೆ ಮೊಬೈಲ್ ಫೋನ್ ಖರೀದಿಸಲು ಸಾಧ್ಯವಾಗದಿರುವುದೇ ಕಾರಣ’ ಎಂದು ಪೋಷಕರು ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.