ADVERTISEMENT

Union Budget 2026: ಸಮಯ ವ್ಯರ್ಥ ಎಂದ ಉದ್ಯಮಿ ಅಶ್ನೀರ್ ಗ್ರೋವರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2026, 10:58 IST
Last Updated 1 ಫೆಬ್ರುವರಿ 2026, 10:58 IST
<div class="paragraphs"><p>ಅಶ್ನೀರ್ ಗ್ರೋವರ್</p></div>

ಅಶ್ನೀರ್ ಗ್ರೋವರ್

   

ಪ್ರಜಾವಾಣಿ ಚಿತ್ರ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ತಮ್ಮ 9ನೇ ಬಜೆಟ್‌ ಅನ್ನು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ADVERTISEMENT

ಉದ್ಯಮಿ ಮತ್ತು ಶಾರ್ಕ್ ಟ್ಯಾಂಕ್ ಇಂಡಿಯಾ ರಿಯಾಲಿಟಿ ಶೋನ ಮಾಜಿ ತೀರ್ಪುಗಾರ ಅಶ್ನೀರ್ ಗ್ರೋವರ್ 2026ರ ಬಜೆಟ್‌ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಈ ವರ್ಷದ ಬಜೆಟ್ ಶಾರ್ಕ್ ಟ್ಯಾಂಕ್‌ ರಿಯಾಲಿಟಿ ಶೋನಲ್ಲಿ ನನ್ನ‌ ಮಾತನ್ನು  ನೆನಪಿಸಿತು. ‘ನಿಮ್ಮ ಮತ್ತು ನಮ್ಮೆಲ್ಲರ ಸಮಯವನ್ನು ವ್ಯರ್ಥ ಮಾಡಿದ್ದೀರಿ’ ಎಂದು ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಳಕೆದಾರರು, ‘ನಿಮ್ಮ ಮಾತನ್ನು ಒಪ್ಪುತ್ತೇನೆ. ಸಮಯ ವ್ಯರ್ಥ ಮಾಡಿದ ಬಜೆಟ್ ಎಂದಿದ್ದಾರೆ.

‘ಕನಿಷ್ಠ ಪಕ್ಷ ಶಾರ್ಕ್ ಟ್ಯಾಂಕ್ ಭಾಷಣಗಳು 10 ನಿಮಿಷಗಳಲ್ಲಿ ಕೊನೆಗೊಳ್ಳುತ್ತವೆ.’ ಎಂದು ಗ್ರೋವರ್ ಅವರ ಪೋಸ್ಟ್‌ಗೆ ಆನ್‌ಲೈನ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.