ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಹೊಸ ಕಾಲೇಜಿಗೆ ‘ವೀರ್ ಸಾವರ್ಕರ್’ ಹೆಸರಿಡಲು ನಿರ್ಧಾರ ಕೈಗೊಂಡ ಕುಲಪತಿಯ ನಿರ್ಧಾರವನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶ್ಲಾಘಿಸಿದ್ದಾರೆ.
ಈ ನಿರ್ಧಾರವನ್ನು ವಿರೋಧಿಸುತ್ತಿರುವವರು ‘ವಸಾಹತುಶಾಹಿ ಮನಸ್ಥಿತಿ’ ಹೊಂದಿದವರು ಎಂದು ಟೀಕಿಸಿದ್ದಾರೆ.
ನಜಾಫಗಢದ ರೋಶನ್‌ಪುರದಲ್ಲಿ ಹೊಸ ಕಾಲೇಜಿನ ನಿರ್ಮಾಣಕ್ಕೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿಪೂಜೆ ನೆರವೇರಿಸಿದ್ದರು.
‘ಸಾವರ್ಕರ್ ಅವರು ಮಹಾನ್ ರಾಷ್ಟ್ರೀಯತವಾದಿ. ಕೆಲವು ವಸಾಹತುಶಾಹಿ ಮನಸ್ಥಿತಿಯವರು ಮಾತ್ರ ದೆಹಲಿ ಕಾಲೇಜಿಗೆ ಅವರ ಹೆಸರು ಇಡುವುದನ್ನು ವಿರೋಧಿಸುತ್ತಿದ್ದಾರೆ. ಹೊಸ ಕಾಲೇಜಿಗೆ ಅವರ ಹೆಸರು ಇಟ್ಟಿರುವ ದೆಹಲಿ ವಿ.ವಿಯ ಕುಲಪತಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಪ್ರಧಾನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.