ADVERTISEMENT

'ಭಾರತ್‌ ಮಾತಾ ಕೀ ಜೈ' ಘೋಷಣೆ ಕೂಗದವರ ವಿರುದ್ಧ ಸಚಿವೆ ಮೀನಾಕ್ಷಿ ಲೇಖಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 14:12 IST
Last Updated 3 ಫೆಬ್ರುವರಿ 2024, 14:12 IST
<div class="paragraphs"><p>ಮೀನಾಕ್ಷಿ ಲೇಖಿ</p></div>

ಮೀನಾಕ್ಷಿ ಲೇಖಿ

   

ಕೋಯಿಕ್ಕೋಡ್‌ (ಕೇರಳ): ‘ಭಾರತ್‌ ಮಾತಾ ಕೀ ಜೈ’ ಘೋಷಣೆ ಕೂಗದ ವೀಕ್ಷಕರನ್ನು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ಯುವ ಸಮಾವೇಶದಿಂದ ಹೊರಗೆ ಕಳುಹಿಸಿದ ಘಟನೆ ಶನಿವಾರ ನಡೆದಿದೆ. 

ತಾನು ಉಚ್ಚರಿಸಿದ ಘೋಷಣೆಯನ್ನು ಪುನರಾವರ್ತಿಸುವಂತೆ ಪದೇ ಪದೇ ಹೇಳಿದರೂ ನಿರಾಕರಿಸಿದ ವೀಕ್ಷಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವೆ ಲೇಖಿ, ಮಹಿಳೆಯೊಬ್ಬರನ್ನು ಕಾರ್ಯಕ್ರಮದ ಸ್ಥಳದಿಂದ ಹೊರಹೋಗುವಂತೆ ಸೂಚಿಸಿದರು.

ADVERTISEMENT

ಕೇರಳದಲ್ಲಿ ನಡೆಯುತ್ತಿರುವ ಯುವ ಸಮಾವೇಶದಲ್ಲಿ ತಮ್ಮ ಭಾಷಣದ ಮುಕ್ತಾಯದ ವೇಳೆ ಸಚಿವೆ ಲೇಖಿ ಅವರು ಭಾರತ್‌ ಮಾತಾ ಕೀ ಜೈ ಘೊಷಣೆ ಕೂಗಿದರು. ಬಳಿಕ ಅದನ್ನು ವೀಕ್ಷಕರು ಪುನಾರವರ್ತಿಸುವಂತೆ ತಿಳಿಸಿದರು. ವೀಕ್ಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ಬರಲಿಲ್ಲ.  ಆಗ ಕೋಪಗೊಂಡ ಸಚಿವೆ ‘ಭಾರತ ನಿಮ್ಮ ಮನೆಯಲ್ಲ ಎಂದೆನಿಸುತ್ತದೆ’ ಎಂದರು. ಮಹಿಳೆಯೊಬ್ಬರನ್ನು ಎದ್ದು ನಿಲ್ಲಲು ಹೇಳಿದರು. ಸಚಿವೆ ಮತ್ತೊಮ್ಮೆ ಘೋಷಣೆ ಕೂಗಿದಾಗಲೂ ಮಹಿಳೆ ಅದನ್ನು ಪುನರಾವರ್ತಿಸಲಿಲ್ಲ. ಆಕ್ರೋಶಗೊಂಡ ಸಚಿವೆ ‘ನೀವು ಕಾರ್ಯಕ್ರಮ ಸ್ಥಳದಿಂದ ನಿರ್ಗಮಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.