ADVERTISEMENT

ಪ್ರತಿ ಗ್ರಾಮ ಪಂಚಾಯಿತಿಗೆ ಇಂಟರ್‌ನೆಟ್‌ ಒದಗಿಸುವ ಭಾರತ್‌ನೆಟ್‌ ಯೋಜನೆಗೆ ಉತ್ತೇಜನ

ಡಿಜಿಟಲ್‌

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 7:11 IST
Last Updated 5 ಜುಲೈ 2019, 7:11 IST
   

ನವದೆಹಲಿ: ದೇಶದ ಪ್ರತಿ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳಲ್ಲೂ ಇಂಟರ್‌ನೆಟ್‌ ಸೇವೆ ಒದಗಿಸುವಭಾರತ್‌ ನೆಟ್‌ ಯೋಜನೆಯ ವೇಗ ಹೆಚ್ಚಿಸಲುಕೇಂದ್ರ ಸರ್ಕಾರ ಉದ್ದೇಶಿಸಿದೆ.

ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್‌ ಸಾಕ್ಷರತಾ ಅಭಿಯಾನದ ಅಡಿಯಲ್ಲಿ ಈಗಾಗಲೇ ಜಾರಿಗೆ ತರಲಾಗಿರುವ ಭಾರತ್‌ನೆಟ್‌ ಯೋಜನೆಗೆ ‘ಜಾಗತಿಕ ಸೇವಾ ಬಾಧ್ಯತಾ ಅನುದಾನ’ದ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರ ಈ ವರೆಗೆ 2 ಕೋಟಿ ಗ್ರಾಮೀಣ ಭಾರತೀಯರನ್ನು ಡಿಜಿಟಲ್‌ ಸಾಕ್ಷರರನ್ನಾಗಿ ಮಾಡಿರುವುದಾಗಿಯೂ ಇದೇ ವೇಳೆ ವಿತ್ತ ಮಂತ್ರಿ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.

ADVERTISEMENT

ಸ್ವಚ್ಛ ಭಾರತ ಅಭಿಯಾನದ ಕುರಿತು ಮಾಹಿತಿ ನೀಡುವ ಸ್ವಚ್ಛಭಾರತ ಆ್ಯಪ್‌ ಅನ್ನು ಈ ವರೆಗೆ ಒಂದು ಕೋಟಿ ಜನ ಡೌನ್‌ಲೋಡ್‌ ಮಾಡಿಕೊಂಡಿರುವುದಾಗಿಯೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.