ನವದೆಹಲಿ: ಬಿಜೆಪಿ ಶಾಸಕಕುಲದೀಪ್ ಸೆಂಗಾರ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಸಂಚರಿಸುತ್ತಿದ್ದ ಕಾರು ಭಾನುವಾರ ಅಪಘಾತಕ್ಕೀಡಾಗಿದೆ.
ರಾಯ್‌ಬರೇಲಿಯಲ್ಲಿ ಸಂತ್ರಸ್ತೆ ಸಂಚರಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡಿದಿದ್ದು, ಈಕೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.ಈಕೆಯ ಜತೆ ಅತ್ತೆ ಮತ್ತು ವಕೀಲ ಮಹೇಂದ್ರ ಸಿಂಗ್ ಕಾರಿನಲ್ಲಿದ್ದಿದ್ದು, ಅಪಘಾತ ಸ್ಥಳದಲ್ಲೇ ಇವರಿಬ್ಬರು ಮೃತಪಟ್ಟಿದ್ದಾರೆ.ಸಂತ್ರಸ್ತೆಯನ್ನು ಲಖನೌ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಯ್‌ಬರೇಲಿ ಜೈಲಿನಲ್ಲಿರುವ ಮಾವ ಮಹೇಶ್ ಸಿಂಗ್ ಅವರನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಬಿಜೆಪಿ ಶಾಸಕ ಕುಲದೀರ್ ಸೆಂಗಾರ್ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಈ ಮಹಿಳೆ ಆರೋಪಿಸಿದ್ದರು.2018ರಿಂದ ಕುಲದೀಪ್ ತನ್ನ ಸಹೋದರ ಅತುಲ್ ಸಿಂಗ್ ಜತೆ ಜೈಲಿನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.