ADVERTISEMENT

ಒಡಿಶಾದಲ್ಲಿ ರಷ್ಯಾ ಸಂಸದನ ಅಸಹಜ ಸಾವು: ಸಿಐಡಿ ತನಿಖೆಗೆ ಆದೇಶ

ಪಿಟಿಐ
Published 27 ಡಿಸೆಂಬರ್ 2022, 15:42 IST
Last Updated 27 ಡಿಸೆಂಬರ್ 2022, 15:42 IST
   

ಭುವನೇಶ್ವರ (ಪಿಟಿಐ): ರಷ್ಯಾದ ಸಂಸದ ಪಾವೆಲ್‌ ಆ್ಯಂಥವ್‌ ಹಾಗೂ ವಕೀಲ ವಾಡ್ಲಿಮಿರ್‌ ಬಿದೆವೊ ಅವರ ಅಸಹಜ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ, ಒಡಿಶಾದ ಪೊಲೀಸ್‌ ಮಹಾನಿರ್ದೇಶಕ ಸುನಿಲ್‌ ಕುಮಾರ್‌ ಬನ್ಸಾಲ್‌ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಆ್ಯಂಥವ್‌ ಅವರು ಡಿ.24ರಂದು ರಾಯಗಢದ ಹೋಟೆಲ್‌ವೊಂದರ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ವಾಡ್ಲಿಮಿರ್‌ ಬಿದೆವೊ ಅವರು ಡಿ.22ರಂದು ಇದೇ ಹೋಟೆಲ್‌ನ ತಮ್ಮ ಕೋಣೆಯಲ್ಲಿ ಮೃತಪಟ್ಟಿದ್ದರು.

‘ಆ್ಯಂಥವ್‌ ಅವರು ತಮ್ಮ 66ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಬಿದೆವೊ ಸೇರಿದಂತೆ ತಮ್ಮ ಇಬ್ಬರು ಸ್ಮೇಹಿತರೊಂದಿಗೆ ರಾಯಗಢಕ್ಕೆ ಬಂದಿದ್ದರು’ ಎಂದು ‍‍ಪೊಲೀಸರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.