ADVERTISEMENT

ಮತ ಯಂತ್ರ ಪತ್ತೆ: ‘ಇದು ಮೀಸಲಿಟ್ಟಿದ್ದ ಇವಿಎಂ’ ಎಂದು ಚುನಾವಣಾ ಅಧಿಕಾರಿ ಸ್ಪಷ್ಟನೆ

ಪಿಟಿಐ
Published 2 ಮೇ 2021, 5:19 IST
Last Updated 2 ಮೇ 2021, 5:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈಲಕಂಡಿ(ಅಸ್ಸಾಂ): ಮತ ಎಣಿಕೆ ಕೇಂದ್ರದ ಆವರಣದಲ್ಲಿ ಶನಿವಾರ ಸಂಜೆ ಪೆಟ್ಟಿಗೆಯೊಂದರಲ್ಲಿ ಬಳಕೆಯಾಗದ ವಿದ್ಯುನ್ಮಾನ ಮತ ಯಂತ್ರಗಳು(ಇವಿಎಂ) ಪತ್ತೆಯಾಗಿದೆ.

ಇವಿಎಂಗಳು ಪತ್ತೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಚುನಾವಣಾಧಿಕಾರಿ ಮೇಘ್‌ ನಿಧಿ ದಹಾಲ್‌ ಅವರು ಮತಗಟ್ಟೆ ಅಧಿಕಾರಿಗಳೊಂದಿಗೆ ಯಂತ್ರಗಳನ್ನು ಪರಿಶೀಲಿಸಲು ಘಟನಾ ಸ್ಥಳಕ್ಕೆ ತೆರಳಿದರು. ಇದೇ ವೇಳೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಸ್ಥಳಕ್ಕೆ ಧಾವಿಸಿದರು.

ಈ ಕುರಿತು ತನಿಖೆ ನಡೆಸಿದ ನಂತರ, ‘ಈ ಯಂತ್ರಗಳನ್ನು ಮತದಾನದ ದಿನದಂದು ಹೆಚ್ಚುವರಿ ಯಂತ್ರಗಳನ್ನಾಗಿ ಮೀಸಲಿಡಲಾಗಿತ್ತು. ಈ ಯಂತ್ರಗಳಲ್ಲಿ ಯಾವುದೇ ಮತಗಳನ್ನು ಚಲಾಯಿಸಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಪತ್ತೆಯಾದ ಬಳಕೆಯಾಗದಿರುವ ಮತಯಂತ್ರವನ್ನು ಅಭ್ಯರ್ಥಿಗಳ ಎದುರು ತೆರೆದು ನೋಡಲಾಯಿತು. ಈ ಯಂತ್ರ ದುರುಪಯೋಗವಾಗಿಲ್ಲ ಎಂದು ಅಭ್ಯರ್ಥಿಗಳು ಸಮಾಧಾನಗೊಂಡಿದ್ದಾರೆ. ತಕ್ಷಣ ಈ ಮತಯಂತ್ರವನ್ನು ಗೋದಾಮಿಗೆ ಸುರಕ್ಷಿತವಾಗಿ ಕಳುಹಿಸಲಾಯಿತು ಎಂದು ವಿವರಿಸಲಾಗಿದೆ.

‘ಇದು ಮೀಸಲಿಟ್ಟಿದ್ದ ಇವಿಎಂ, ಮತ ಎಣಿಕೆ ಕೇಂದ್ರಕ್ಕೆ ತೆಗೆದುಕೊಂಡು ಹೋಗಿದ್ದ ಪೆಟ್ಟಿಗೆಯಲ್ಲಿ ಮತದಾನವಾದ ಯಂತ್ರಗಳೊಟ್ಟಿಗೆ ಪತ್ತೆಯಾಗಿತ್ತು‘ ಎಂದು ದಹಾಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.