ADVERTISEMENT

UP Election Results 2022: ಸಿಎಂ ಯೋಗಿ, ಮಾಜಿ ಸಿಎಂ ಅಖಿಲೇಶ್‌ಗೆ ಮುನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2022, 5:39 IST
Last Updated 10 ಮಾರ್ಚ್ 2022, 5:39 IST
ಅಖಿಲೇಶ್ ಯಾದವ್ ಮತ್ತು ಯೋಗಿ ಆದಿತ್ಯನಾಥ
ಅಖಿಲೇಶ್ ಯಾದವ್ ಮತ್ತು ಯೋಗಿ ಆದಿತ್ಯನಾಥ   

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತುಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಆರಂಭಿಕ ಮುನ್ನಡೆ ಪಡೆದುಕೊಂಡಿದ್ದಾರೆ.

ಸಿಎಂ ಯೋಗಿಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರುಗೋರಖಪುರ ನಗರ ಕ್ಷೇತ್ರದಿಂದ ಮತ್ತು ಯಾದವ್‌ ಕರ್ಹಾಲ್‌ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಮಾರ್ಚ್‌ 3ರಂದು ನಡೆದ ಮತದಾನ ಪ್ರಕ್ರಿಯೆ ವೇಳೆ ಗೋರಖಪುರದ ಶೇ 53.30 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಯೋಗಿ ಆದಿತ್ಯನಾಥ ಮತ ಗಳಿಕೆಯ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.

ADVERTISEMENT

ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿಯೂ ಆಗಿರುವಅಖಿಲೇಶ್ ಯಾದವ್‌ ಸದ್ಯ7,298 ಮತಗಳನ್ನು ಗಳಿಸಿದ್ದು, ಅವರ ಸಮೀಪದ ಸ್ಪರ್ಧಿ ಕೇಂದ್ರ ಸಚಿವ ಎಸ್‌ಪಿ ಸಿಂಗ್ ಬಘೇಲ್ ಕೇವಲ 504 ಮತ ಪಡೆದಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.