ADVERTISEMENT

ಉತ್ತರ ಪ್ರದೇಶ: ಮಾಜಿ ಸಿಎಂ ಕಲ್ಯಾಣ್ ಸಿಂಗ್ ಆರೋಗ್ಯ ಸ್ಥಿತಿ ಗಂಭೀರ

ಡೆಕ್ಕನ್ ಹೆರಾಲ್ಡ್
Published 20 ಆಗಸ್ಟ್ 2021, 10:25 IST
Last Updated 20 ಆಗಸ್ಟ್ 2021, 10:25 IST
ಕಲ್ಯಾಣ್ ಸಿಂಗ್ (ಪಿಟಿಐ ಚಿತ್ರ)
ಕಲ್ಯಾಣ್ ಸಿಂಗ್ (ಪಿಟಿಐ ಚಿತ್ರ)   

ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

‘ಅವರ ರಕ್ತದೊತ್ತಡ ಕಡಿಮೆಯಾಗಿದೆ. ಮೂತ್ರ ವಿಸರ್ಜಿಸಲೂ ಅವರಿಗೆ ಸಾಧ್ಯವಾಗುತ್ತಿಲ್ಲ. ಅವರನ್ನು ಡಯಾಲಿಸಿಸ್‌ಗೆ ಒಳಪಡಿಸಲಾಗಿದೆ’ ಎಂದು ಸಂಜಯ್‌ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆ (ಎಸ್‌ಜಿಪಿಜಿಐಎಂಎಸ್‌) ಆಸ್ಪತ್ರೆಯ ನಿರ್ದೇಶಕ, ಪ್ರೊ ಆರ್‌.ಕೆ. ಧಿಮನ್ ಹೇಳಿದ್ದಾರೆ.

ಸದ್ಯ ಸಿಂಗ್ ಅವರಿಗೆ ವೆಂಟಿಲೇಟರ್‌ ಅಳವಡಿಸಲಾಗಿದೆ.

ADVERTISEMENT

ಕಲ್ಯಾಣ್ ಸಿಂಗ್ ಅವರನ್ನು ಸೋಂಕು ಮತ್ತಿತರ ಆರೋಗ್ಯ ಸಮಸ್ಯೆಯಿಂದಾಗಿ ಜುಲೈ 4ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಲು ರಾಮ ಮನೋಹರ್ ಲೋಹಿಯಾ ವೈದ್ಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಎಸ್‌ಜಿಪಿಜಿಐಎಂಎಸ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.