ADVERTISEMENT

ಭತ್ತ ಮಾರಾಟಕ್ಕೆ ನಿರ್ಬಂಧ: ಹರಿಯಾಣ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ

ಪಿಟಿಐ
Published 20 ಅಕ್ಟೋಬರ್ 2021, 9:23 IST
Last Updated 20 ಅಕ್ಟೋಬರ್ 2021, 9:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಜಾಫ್ಫರ್‌ನಗರ(ಉತ್ತರ ಪ್ರದೇಶ): ಇತರೆ ರಾಜ್ಯಗಳಲ್ಲಿ ಬೆಳೆದ ಭತ್ತವನ್ನು ಹರಿಯಾಣ ಮಂಡಿಯಲ್ಲಿ ಮಾರಾಟ ಮಾಡದಂತೆ ನಿರ್ಬಂಧ ವಿಧಿಸಿರುವ ಹರಿಯಾಣ ಸರ್ಕಾರದ ಕ್ರಮವನ್ನು ವಿರೋಧಿಸಿರುವ ರೈತರು ಮಂಗಳವಾರ ಬಿದೋಲಿ ಮತ್ತು ಕೈರಾಣಾ ಸಮೀಪದ ಉತ್ತರ ಪ್ರದೇಶ– ಹರಿಯಾಣ ಗಡಿ ಭಾಗದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಬಿಡೋಲಿ ಗಡಿಯಲ್ಲಿ ಕರ್ನಾಲ್– ಮೀರತ್ ಹೆದ್ದಾರಿ ಹಾಗೂ ಕೈರಾನಾ ಬಳಿ ಪಾಣಿಪತ್‌–ಖಾತಿಮಾ ಹೆದ್ದಾರಿಯನ್ನು ಬಂದ್‌ ಮಾಡಿ ರೈತರು ಪ್ರತಿಭಟನೆ ನಡೆಸಿದರು ಎಂದು ಪೊಲೀಸ್ ಹೊರಠಾಣೆ ಉಸ್ತುವಾರಿ ಸತ್ಪಾಲ್ ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT