ADVERTISEMENT

ಕುಂಭಮೇಳದಲ್ಲಿ ಶಾರ್ಟ್‌ ಸರ್ಕೀಟ್‌: ಹೊತ್ತಿ ಉರಿದ ಎರಡು ಕಾರು, 18 ಕ್ಯಾಂಪ್‌ಗಳು

ಪಿಟಿಐ
Published 25 ಜನವರಿ 2025, 9:28 IST
Last Updated 25 ಜನವರಿ 2025, 9:28 IST
<div class="paragraphs"><p>ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಬಳಿ ನಿರ್ಮಿಸಿರುವ ಮಹಾಕುಂಭ ನಗರ ದೀಪದ ಬೆಳಕಿನಲ್ಲಿ</p></div>

ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಬಳಿ ನಿರ್ಮಿಸಿರುವ ಮಹಾಕುಂಭ ನಗರ ದೀಪದ ಬೆಳಕಿನಲ್ಲಿ

   

ಪಿಟಿಐ ಚಿತ್ರ

ಮಹಾಕುಂಭ ನಗರ: ವಿದ್ಯುತ್ ಶಾರ್ಟ್‌ ಸರ್ಕೀಟ್‌ನಿಂದಾಗಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಗಂಗಾ, ಯಮುನಾ ಹಾಗೂ ಪೌರಾಣಿಕ ಸರಸ್ವತಿ ನದಿಯ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಎರಡು ಕಾರುಗಳು ಹೊತ್ತಿ ಉರಿದಿವೆ.

ADVERTISEMENT

ವಾರಾಣಸಿ ಕಡೆಯಿಂದ ಕುಂಭ ಮೇಳ ನಡೆಯುವ ಪ್ರದೇಶಕ್ಕೆ ಹೋಗುವ ಮಾರ್ಗದಲ್ಲಿ ಬಳಿ ಕಾರಿಗೆ ಬೆಂಕಿ ತಗುಲಿದೆ. ಅದರ ಪಕ್ಕದಲ್ಲೇ ಇದ್ದ ಮತ್ತೊಂದು ಕಾರಿಗೂ ಬೆಂಕಿ ತಗುಲಿದ ಪರಿಣಾಮ ಎರಡೂ ಕಾರುಗಳು ಸುಟ್ಟು ಕರಕಲಾಗಿವೆ ಎಂದು ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಪ್ರಮೋದ್ ಶರ್ಮಾ ಹೇಳಿದ್ದಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ ಕಾರಿನೊಳಗಿದ್ದವರನ್ನು ಸುರಕ್ಷಿತವಾಗಿ ಹೊರ ಕರೆತಂದಿದ್ಧಾರೆ. ಹೀಗಾಗಿ ಸಾವು, ನೋವಿನ ವರದಿಯಾಗಿಲ್ಲ.

ಕುಂಭ ಮೇಳದಲ್ಲಿ ಹಾಕಲಾಗಿರುವ ಟೆಂಟ್‌ಗಳಲ್ಲಿ 18 ಟೆಂಟ್‌ಗೆ ಬೆಂಕಿ ತಗುಲಿತ್ತು. ಗುಡಿಸಿಲೊಂದರ ಮೇಲ್ಚಾವಣಿಗೆ ಹಾಕಿದ್ದ ಹುಲ್ಲಿಗೆ ಬೆಂಕಿ ತಗುಲಿತ್ತು. ಕ್ಷಣಮಾತ್ರದಲ್ಲಿ ಇದು ಸುತ್ತಲೂ ವ್ಯಾಪಿಸಿತ್ತು. ಇದರ ಪರಿಣಾಮ ಸೆಕ್ಟರ್‌ 19ರಲ್ಲಿ 18 ಗುಡಿಸಲುಗಳು ಸುಟ್ಟು ಭಸ್ಮವಾದವು. ಅಗ್ನಿಶಾಮಕ ದಳದ ಸಿಬ್ಬಂದಿಯ ತೀವ್ರ ಪ್ರಯತ್ನದಿಂದ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.