ADVERTISEMENT

ಜಾತ್ರೆಯಲ್ಲಿ ನಾಪತ್ತೆ: ಬರೋಬ್ಬರಿ 49 ವರ್ಷಗಳ ಬಳಿಕ ಕುಟುಂಬ ಸೇರಿದ ಮಹಿಳೆ!

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2024, 12:36 IST
Last Updated 27 ಡಿಸೆಂಬರ್ 2024, 12:36 IST
<div class="paragraphs"><p>49 ವರ್ಷಗಳ ಬಳಿಕ ಕುಟುಂಬ ಸೇರಿದ ಮಹಿಳೆ</p></div>

49 ವರ್ಷಗಳ ಬಳಿಕ ಕುಟುಂಬ ಸೇರಿದ ಮಹಿಳೆ

   

@azamgarhpolice

ಲಖನೌ: 49 ವರ್ಷಗಳ ಹಿಂದೆ ಬಾಲ್ಯಾವಸ್ಥೆಯಲ್ಲಿದ್ದಾಗ ಕಾಣಿಯಾಗಿದ್ದ ಮಹಿಳೆಯೊಬ್ಬರನ್ನು ಇದೀಗ ಕುಟುಂಬದೊಂದಿಗೆ ಮತ್ತೆ ಸೇರಿಸುವ ಮೂಲಕ ಉತ್ತರ ಪ್ರದೇಶದ ಅಜಂಗಢ ಪೊಲೀಸರು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದರು.

ADVERTISEMENT

57 ವರ್ಷದ ಫುಲ್ಮತಿ ಅಲಿಯಾಸ್ ಫುಲಾ ದೇವಿ ಅವರು ಮೊರಾದಾಬಾದ್‌ ಜಾತ್ರೆಯಲ್ಲಿ 8 ವರ್ಷ ವಯಸ್ಸಿನವರಿದ್ದಾಗ ನಾಪತ್ತೆಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಯಿಯೊಂದಿಗೆ ಜಾತ್ರೆಗೆ ಹೋಗಿದ್ದ ಫುಲಾ ದೇವಿ ನಾಪತ್ತೆಯಾಗಿದ್ದರು. ಆ ಸಂದರ್ಭದಲ್ಲಿ ವೃದ್ಧರೊಬ್ಬರು ಆಕೆಯನ್ನು ಕರೆದೊಯ್ದದ್ದು ಆಕೆಯನ್ನು ರಾಂಪುರದ ನಿವಾಸಿಗೆ ಮಾರಾಟ ಮಾಡಿದ್ದರು. ಬಳಿಕ ಫುಲ್ಮತಿ ಅಲ್ಲಿಯೇ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಳು. ಆದರೆ ಆಕೆ ತನ್ನ ಕುಟುಂಬದ ಹುಡುಕಾಟದಲ್ಲಿ ಇದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

'ಆಪರೇಷನ್ ಮುಸ್ಕಾನ್' ಕಾರ್ಯಕ್ರಮದ ಅಡಿಯಲ್ಲಿ ಆಕೆಯನ್ನು ಕುಟುಂಬಕ್ಕೆ ಮತ್ತೆ ಸೇರಿಸುವ ಪ್ರಕ್ರಿಯೆ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಹೇಮರಾಜ್ ಮೀನಾ ಹೇಳಿದ್ದಾರೆ.

ರಾಂಪುರದ ಶಾಲಾ ಶಿಕ್ಷಕಿ ಡಾ.ಪೂಜಾ ರಾಣಿ ಅವರು ಹೆಚ್ಚುವರಿ ಎಸ್ಪಿ ಶೈಲೇಂದ್ರ ಲಾಲ್ ಅವರಿಗೆ ಫುಲ್ಮತಿ ನಾಪತ್ತೆಯಾಗಿದ್ದ ಬಗ್ಗೆ ತಿಳಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಇದೇ ವೇಳೆ ಫುಲ್ಮತಿ ಹಲವಾರು ವರ್ಷಗಳಿಂದ ಕುಟುಂಬದ ಹುಡುಕಾಟದಲ್ಲಿ ಇದ್ದಾರೆ ಎಂದೂ ಶಿಕ್ಷಕಿ ವಿವರಿಸಿದ್ದಾರೆ

ತನಿಖೆಯನ್ನು ಆರಂಭಿಸಿದ ಪೊಲೀಸರು ಫುಲ್ಮತಿ ಚಿಕ್ಕಪ್ಪನ ವಿಳಾಸವನ್ನು ಪತ್ತೆ ಮಾಡಿದರು. ಬಳಿಕ ಆಕೆಯ ಸಹೋದರ ಲಾಲ್‌ಧರ್‌ನನ್ನು ಅಜಂಗಢ್ ಜಿಲ್ಲೆಯ ಬೇಡ್‌ಪುರ್ ಗ್ರಾಮದಲ್ಲಿರುವುದನ್ನು ಪತ್ತೆ ಹಚ್ಚಲಾಯಿತು. 49 ವರ್ಷಗಳ ಬಳಿಕ ಆಕೆಗೆ ಕುಟುಂಬ ಸಿಕ್ಕಿದೆ. ದಶಕಗಳ ನಂತರ ಕುಟುಂಬವನ್ನು ಒಟ್ಟಿಗೆ ನೋಡುವುದು ಹೃದಯಸ್ಪರ್ಶಿಯಾಗಿದೆ ಎಂದು ಮೀನಾ ಸಂತಸ ಹಂಚಿಕೊಂಡಿದ್ದಾರೆ.

ಫುಲ್ಮತಿ ಮತ್ತು ಆಕೆಯ ಕುಟುಂಬದವರು ಪೊಲೀಸರ ಸಮರ್ಪಣಾ ಮನೋಭಾವಕ್ಕೆ ಪ್ರಶಂಸೆ ಜತೆಗೆ ಧನ್ಯವಾದ ಅರ್ಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.